ಲಡಾಕ್, ಜಮ್ಮು- ಕಾಶ್ಮೀರದಲ್ಲಿ ಕಂಪಿಸಿದ ಭೂಮಿ

Update: 2023-06-09 16:05 GMT

ಜಮ್ಮು, ಜೂ. 9: ಲಡಾಕ್, ಜಮ್ಮು ಹಾಗೂ ಕಾಶ್ಮೀರ ವಲಯದಲ್ಲಿ 3.9 ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಆದರೆ, ಯಾವುದೇ ಸಾವು-ನೋವು, ಸೊತ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪ ಬೆಳಗ್ಗೆ 10.30ಕ್ಕೆ ಸಂಭವಿಸಿತು ಹಾಗೂ ಕಂಪನ ಕೆಲವು ಸೆಕೆಂಡುಗಳ ಕಾಲ ಇತ್ತು ಎಂದು ಅವರು ಹೇಳಿದ್ದಾರೆ. ಭೂಕಂಪದ ಆಳವು 35.64 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 76.62 ಡಿಗ್ರಿ ಪೂರ್ವ ರೇಖಾಂಶದಲ್ಲಿ ಭೂಮಿಯ ಮೇಲ್ಮೈಯಿಂದ 10 ಕಿ.ಮೀ. ಕೆಳಗೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪ ಲಡಾಖ್ ನಲ್ಲಿ ಕೇಂದ್ರವನ್ನು ಹೊಂದಿತ್ತು ಅಧಿಕಾರಿಗಳು ಹೇಳಿದ್ದಾರೆ.

Similar News