ಬೈಡನ್‍ಗೆ ಉಕ್ರೇನ್ ಸಂಸ್ಥೆಯಿಂದ 5 ದಶಲಕ್ಷ ಡಾಲರ್ ಲಂಚ: ಫಾಕ್ಸ್‍ನ್ಯೂಸ್ ವರದಿ

Update: 2023-06-10 17:44 GMT

ನ್ಯೂಯಾರ್ಕ್: ಅಮೆರಿಕದಲ್ಲಿ ತೈಲ ಮಾರಾಟ ಹಕ್ಕು ಮತ್ತು ಅಮೆರಿಕದ ತೈಲ ಸಂಸ್ಥೆಗಳೊಂದಿಗೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಲು ಉಕ್ರೇನ್‍ನ ಸಂಸ್ಥೆಯೊಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‍ಗೆ 5 ದಶಲಕ್ಷ ಡಾಲರ್ ಲಂಚ ನೀಡಿದೆ ಎಂದು ಫಾಕ್ಸ್‍ನ್ಯೂಸ್ ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಉಕ್ರೇನ್‍ನ `ಬರಿಸ್ಮಾ ಹೋಲ್ಡಿಂಗ್ಸ್' ಎಂಬ ಗ್ಯಾಸ್ ಸಂಸ್ಥೆ ಲಂಚ ನೀಡಿದೆ. ಬೈಡನ್ ಪುತ್ರ ಹಂಟರ್ ಬೈಡನ್ ಈ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಬೇರೊಂದು ಲಂಚ ಪ್ರಕರಣದಲ್ಲಿ  ಈ ಸಂಸ್ಥೆಯ ವಿರುದ್ಧ ಉಕ್ರೇನ್‍ನಲ್ಲಿ ತನಿಖೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸಂಸ್ಥೆಯು ಅಮೆರಿಕದಲ್ಲಿ ಹೂಡಿಕೆ ಮಾಡಬೇಕಿದ್ದರೆ ಬೈಡನ್  ಪ್ರಭಾವ ಬಳಸಬೇಕು ಎಂಬ ಕಾರಣಕ್ಕೆ ಲಂಚ ನೀಡಲಾಗಿದೆ.

 2020ರ ವರ್ಷದಲ್ಲಿ ಈ ಪ್ರಕರಣ ನಡೆದಿದ್ದು ಇದರ ಬಗ್ಗೆ ವಿಶ್ವಾಸಾರ್ಹ ಮೂಲವೊಂದು ಅಮೆರಿಕದ ತನಿಖಾ ಸಂಸ್ಥೆ ಎಫ್‍ಬಿಐಗೆ 2020ರ ಜೂನ್‍ನಲ್ಲಿ ಮಾಹಿತಿ ನೀಡಿತ್ತು ಎಂದು ವರದಿ ಹೇಳಿದೆ.

Similar News