×
Ad

ಸೊಮಾಲಿಯಾ: ಹೋಟೆಲ್ ಮೇಲೆ ಉಗ್ರರ ದಾಳಿ; 9 ಮಂದಿ ಮೃತ್ಯು

Update: 2023-06-11 08:33 IST

ಮೊಗದಿಶು: ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಬೀಚ್ಬದಿಯ ರೆಸ್ಟಾರೆಂಟ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಭದ್ರತಾ ಸಿಬಂದಿ ಹಾಗೂ  6 ನಾಗರಿಕರು ಮೃತಪಟ್ಟು 10 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಶನಿವಾರ ಹೇಳಿದ್ದಾರೆ.

ಮೊಗದಿಶು ಕಡಲತೀರದಲ್ಲಿರುವ ಜನಪ್ರಿಯ ಪರ್ಲ್ಬೀಚ್ ಹೋಟೆಲ್ಗೆ ಶುಕ್ರವಾರ ರಾತ್ರಿ 8 ಗಂಟೆವೇಳೆ  ನುಗ್ಗಿದ 7 ಉಗ್ರರು ಹೋಟೆಲಿಗೆ ಮುತ್ತಿಗೆ ಹಾಕಿದ್ದರು. ತಕ್ಷಣ ಹೋಟೆಲ್ನವರು ಮಾಹಿತಿ ನೀಡಿದ್ದರಿಂದ ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಈ ಸಂದರ್ಭ ಉಗ್ರರ ಗುಂಡಿನ ದಾಳಿಯಲ್ಲಿ 6 ನಾಗರಿಕರು ಹಾಗೂ ಮೂವರು ಭದ್ರತಾ ಸಿಬಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಎಲ್ಲಾ ಉಗ್ರರನ್ನೂ ಹತ್ಯೆ ಮಾಡಲಾಗಿದ್ದು ಶನಿವಾರ ಬೆಳಿಗ್ಗೆ 2 ಗಂಟೆಗೆ ಕಾರ್ಯಾಚರಣೆ ಅಂತ್ಯವಾಗಿದೆ.

ಹೋಟೆಲ್ನಲ್ಲಿದ್ದ 84 ಮಂದಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಸೊಮಾಲಿ ಪೊಲೀಸರು ಹೇಳಿದ್ದಾರೆ.

Similar News