×
Ad

ಪೊಲೀಸ್ ಠಾಣೆಯ ಮೇಲೆ ದಾಳಿ: 4 ಪೊಲೀಸರ ಸಹಿತ ಹಲವರು ಮೃತ್ಯು

Update: 2023-06-11 23:38 IST

ಹನೋಯಿ: ವಿಯೆಟ್ನಾಮ್‌ನಲ್ಲಿ ಪೊಲೀಸ್ ಠಾಣೆಯ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 4 ಪೊಲೀಸರ ಸಹಿತ ಹಲವರು ಮೃತಪಟ್ಟಿದ್ದು ಪ್ರಕರಣಕ್ಕೆ ಸಂಬಂಧಿಸಿ 16 ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ  ಹೇಳಿದ್ದಾರೆ.

ಸೆಂಟ್ರಲ್ ಹೈಲ್ಯಾಂಡ್ಸ್ ಪ್ರಾಂತದ ಡಾಕ್‌ಲಾಕ್ ಪ್ರದೇಶದ ಪೊಲೀಸ್ ಠಾಣೆಯ ಮೇಲೆ ರವಿವಾರ ಬೆಳಿಗ್ಗೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿ ಹಲವರನ್ನು ಒತ್ತೆಸೆರೆಯಲ್ಲಿ ಇರಿಸಿದೆ. ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಕಾರ್ಯಾಚರಣೆಯ ಸಂದರ್ಭ 4 ಪೊಲೀಸ್ ಸಿಬಂದಿ, ಓರ್ವ ಸ್ಥಳೀಯ ಆಡಳಿತದ ಸಿಬಂದಿ ಸಹಿತ ಹಲವರು ಮೃತಪಟ್ಟಿದ್ದಾರೆ.

ಮೃತರ ಹಾಗೂ ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭಿಸಿಲ್ಲ. ಕಾರ್ಯಾಚರಣೆ ಯಶಸ್ವಿಯಾಗಿದ್ದು 16 ಶಂಕಿತರನ್ನು ಬಂಧಿಸಿದ್ದು ಅವರ ಒತ್ತೆಸೆರೆಯಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

Similar News