ಜೂ.15ರಂದು ಮಂಗಳೂರು-ಮಡಗಾ೦ವ್ ರೈಲು ಸಂಚಾರದಲ್ಲಿ ವ್ಯತ್ಯಯ
Update: 2023-06-13 19:46 IST
ಉಡುಪಿ, ಜೂ.13: ಕೊಂಕಣ ರೈಲು ಮಾರ್ಗದ ಮಡಗಾ೦ವ್- ಕುಮಟ ವಿಭಾಗದ ನಡುವೆ ಜೂ.15ರಂದು ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ಪೆ ಪ್ರಕಟಣೆ ತಿಳಿಸಿದೆ.
ಇದರಿಂದ ಮಂಗಳೂರು ಸೆಂಟ್ರಲ್-ಮಡಗಾ೦ವ್ ಜಂಕ್ಷನ್ ನಡುವೆ ಸಂಚರಿಸುವ ರೈಲು ಸಂಚಾರ ಗುರುವಾರ ವ್ಯತ್ಯಯಗೊಳ್ಳಲಿದೆ. ರೈಲು ನಂ. 06602 ಮಂಗಳೂರು ಸೆಂಟ್ರಲ್- ಮಡಗಾ೦ವ್ ಜಂಕ್ಷನ್ ರೈಲಿನ ಪ್ರಯಾಣವನ್ನು ಕುಮಟ ನಿಲ್ದಾಣದಲ್ಲಿ ಮುಕ್ತಾಯಗೊಳಿಸಲಾಗುವುದು.
ಅದೇ ರೀತಿ ರೈಲು ನಂ.066601 ಮಡಗಾ೦ವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ರೈಲಿನ ಪ್ರಯಾಣ ನಿಗದಿತ ಸಮಯಕ್ಕೆ ಕುಮಟದಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.