ಜೂ.15ರಂದು ಉಡುಪಿ ಮಿಷನ್ ಆಸ್ಪತ್ರೆ ಶತಮಾನೋತ್ಸವ
ವರ್ಷಾಚರಣೆ ಸಮಾರೋಪ- ಸಿಟಿ ಸ್ಕ್ಯಾನ್ ಘಟಕ ಉದ್ಘಾಟನೆ
ಉಡುಪಿ, ಜೂ.14: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮದ ಸಮಾರೋಪ ಸಮಾರಂಭ ಮತ್ತು ಸಿಟಿ ಸ್ಕ್ಯಾನ್ ಘಟಕದ ಉದ್ಘಾಟನೆಯು ಜೂ.15ರಂದು ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, 100 ವರ್ಷವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಆಸ್ಪತ್ರೆಯು ತನ್ನ ಹೊಸ ಸಿಟಿ ಸ್ಕ್ಯಾನ್ ಘಟಕವನ್ನು ಸಮರ್ಪಿ ಸಲಿದೆ. 1.65 ಕೋಟಿ ವೆಚ್ಚದ ನೂತನ ಜಿಇ 32 ಸ್ಲೈಸ್ ಆಸ್ಪೈರ್ ಸಿಟಿ ಸ್ಕ್ಯಾನ್ ಯಂತ್ರವನ್ನು ಅಳವಡಿಸಲಾ ಗಿದ್ದು, ಈ ಹೈಟೆಕ್ ಡಯಾಗ್ನೋಸ್ಟಿಕ್ ಸೌಲಭ್ಯವನ್ನು ಆಸ್ಪತ್ರೆಯು ಉಡುಪಿಯ ಜನತೆಗೆ ಕೈಗೆಟಕುವ ದರದಲ್ಲಿ ಒದಗಿಸಲಿದೆ ಎಂದರು.
ಸಮಾರೋಪ ಕಾರ್ಯಕ್ರಮವು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಉಪಾಧ್ಯಕ್ಷ ರೆ.ವಿಕ್ಟರ್ ನೇತೃತ್ವ ದಲ್ಲಿ ಮಧ್ಯಾಹ್ನ 2:30ಕ್ಕೆ ಮಿಷನ್ ಆಸ್ಪತ್ರೆ ಚಾಪೆಲ್‌ನಲ್ಲಿ ಕೃತಜ್ಞತಾ ಸೇವೆಯೊಂದಿಗೆ ಪ್ರಾರಂಭವಾಗಲಿದೆ. ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಹೈಸೂಲ್‌ನಿಂದ ಆಸ್ಪತ್ರೆಯವರೆಗೆ ಮೆರವಣಿಗೆ ನಡೆಯ ಲಿದ್ದು, ಬಳಿಕ ಸಂಜೆ 5ಗಂಟೆಗೆ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಆವರಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ.
ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಹೇಮ ಚಂದ್ರ ಕುಮಾರ್ ನೂತನ ಸಿಟಿ ಸ್ಕ್ಯಾನ್ ಘಟಕವನ್ನು ಉದ್ಘಾಟಿಸಲಿರುವರು. ಬೆಂಗಳೂರಿನ ಎನ್.ಎಚ್.ಷಾ ಮಜುಂದಾರ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪೌಲ್ ಸಿ.ಸಾಲಿನ್ಸ್ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಲೊಂಬಾರ್ಡ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅಧ್ಯಕ್ಷತೆ ವಹಿಸಲಿರುವರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಖಜಾಂಚಿ ವಿನ್ಸೆಂಟ್ ಪಾಲಣ್ಣ, ಯುಬಿಎಂಸಿ ಅಧ್ಯಕ್ಷ ವಿಶಾಲ ಶಿರಿ, ವೈಎಂಸಿಎ ರಾಷ್ಟ್ರೀಯ ಮಂಡಳಿ ಉಪಾಧ್ಯಕ್ಷ ನೋಯೆಲ್ ಅಮಣ್ಣ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿಲಿಯಂ ಕ್ಯಾರಿ ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಭಾಗವಹಿಸ ಲಿರುವರು ಎಂದು ಅವರು ಮಾಹಿತಿ ನೀಡಿದರು.
ಶತಮಾನೋತ್ಸವದ ಶುಭಸಂದರ್ಭದಲ್ಲಿ ಮಿಷನ್ ಆಸ್ಪತ್ರೆ ಈಗ ಮೂರು ಸ್ಪಷ್ಟ ಉದ್ದೇಶಗಳೊಂದಿಗೆ ವಿಸ್ತರಣೆಯ ಹೊಸ ಪಯಣವನ್ನು ಪ್ರಾರಂಭಿಸಲಿದೆ. ಮುಂದಿನ ದಿನಗಳಲ್ಲಿ ಬಂಜೆತನ ಕ್ಲಿನಿಕ್, ನವಜಾತ ಶಿಶುಗಳ ಘಟಕ, ಕಾರ್ಡಿ ಯಾಕ್ ಕ್ಯಾಥ್ ಲ್ಯಾಬ್ ಮತ್ತು ಕ್ಯಾನ್ಸರ್ ಸೇವೆಗಳನ್ನು ತೆರೆಯುವ ಯೋಜನೆ ಗಳೊಂದಿಗೆ ಮಿಷನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಉದ್ದೇಶದಿಂದ ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ಶಾಸ್ತ್ರಗಳಲ್ಲಿ ಹೆಚ್ಚಿನ ಕೋರ್ಸ್‌ಗಳೊಂದಿಗೆ ತನ್ನ ಶೈಕ್ಷಣಿಕ ನೆಲೆಯನ್ನು ವಿಸ್ತರಿಸಲಾಗುವುದು ಎಂದರು.
1923ರ ಜೂ.15ರಂದು ರಂದು ಸ್ಥಾಪಿತವಾದ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಈ ಪ್ರದೇಶದಲ್ಲಿ ಮೊದಲ ತಾಯಿ-ಮಗು ಕೇಂದ್ರೀಕೃತ ಘಟಕವಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಗಣೇಶ್ ಕಾಮತ್, ಪಿಆರ್‌ಓ ರೋಹಿ ರತ್ನಾಕರ್, ಆಡಳಿತಾಧಿ ಕಾರಿ ಸಿಸ್ಟರ್ ದೀನಾ ಪ್ರಭಾವತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸುಜ ಕರ್ಕಡ ಉಪಸ್ಥಿತರಿದ್ದರು.