×
Ad

ದಿಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಅಗ್ನಿ ಆಕಸ್ಮಿಕ: ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿಯುತ್ತಿರುವ ವೀಡಿಯೊ ವೈರಲ್

Update: 2023-06-15 14:37 IST

ಹೊಸದಿಲ್ಲಿ: ದಿಲ್ಲಿಯ ಮುಖರ್ಜಿ ನಗರದಲ್ಲಿ ಗುರುವಾರ ಕೋಚಿಂಗ್ ಸೆಂಟರ್ ಇರುವ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಗಳು ಅದ್ಭುತ ರೀತಿಯಲ್ಲಿ  ಪಾರಾಗಿದ್ದಾರೆ.  ಮಧ್ಯಾಹ್ನ 12.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ.‌ ವಿದ್ಯಾರ್ಥಿಗಳು ಕಟ್ಟಡದ ಕಿಟಕಿಯಿಂದ ಹೊರಬಂದು ಕೆಳಗೆ ಜಿಗಿಯುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ವೈಯರ್ ಹಾಗೂ ಹಗ್ಗಗಳನ್ನು  ಬಳಸಿ ಕಟ್ಟಡದಿಂದ ಕೆಳಗೆ ಇಳಿದಿರುವ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ANI ಪ್ರಕಾರ, 11 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಹಾಗೂ  ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅಪಾಯದಿಂದ ಪಾರು ಮಾಡಲು ಸಹಾಯ ಮಾಡಿದರು.

ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಿದ್ಯುತ್ ಮೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಉಪಕರಣದಿಂದ ಹೊರಹೊಮ್ಮುವ ಹೊಗೆಯಿಂದಾಗಿ ವಿದ್ಯಾರ್ಥಿಗಳು ಗಾಬರಿಗೊಂಡರು ಹಾಗೂ ಕೋಚಿಂಗ್ ಸೆಂಟರ್‌ನ ಹಿಂಭಾಗದಿಂದ ಕಿಟಕಿಯಿಂದ ಹೊರಬಂದು ಕೆಳಗೆ ಇಳಿಯಲು ಮುಂದಾದರು.

Similar News