×
Ad

ಅಭಿವೃದ್ಧಿಯ ಧಾವಂತದಲ್ಲಿ ಪರಿಸರ ನಾಶ ಸರಿಯಲ್ಲ: ಸುಬ್ರಹ್ಮಣ್ಯ ಆಚಾರ್ಯ

Update: 2023-06-15 17:34 IST

ಉಡುಪಿ, ಜೂ.15: ಅಭಿವೃದ್ಧಿಯ ಧಾವಂತದಲ್ಲಿ ಪರಿಸರ ನಾಶ ಮಾಡು ವುದು ಸರಿಯಲ್ಲ ಎಂದು ಉಡುಪಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಹೇಳಿದ್ದಾರೆ.

ಉಡುಪಿ ಫ್ರೀ ಓನ್ಡ್ ವೈಕಲ್ಸ್ ಡೀಲರ್ಸ್‌ ಅಸೋಸಿಯೇಷನ್ ಉಡುಪಿ ಇದರ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಗುರುವಾರ ನಡೆದ ಒಂದು ಸಾವಿರಕ್ಕೂ ಮಿಕ್ಕಿ ಲಕ್ಷ್ಮಣ ಫಲ ಗಿಡ ಮತ್ತು ಇನ್ನಿತರ ಪರಿಸರಕ್ಕೆ ಪೂರಕವಾದ ಗಿಡಗಳನ್ನು ಉಚಿತವಾಗಿ ನೀಡಿ, ಸಾರ್ವಜನಿಕ ಪ್ರದೇಶಗಳಲ್ಲಿ ನೆಟ್ಟು ರಕ್ಷಣಾ ಬೇಲಿ ಹಾಕಿ ಪೋಷಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆಯ ಪೌರಾಯುಕ್ತ ರಮೇಶ್ ಪಿ.ನಾಯ್ಕ್ ಮಾತನಾಡಿ, ಗಿಡಗಳನ್ನು ಕನಿಷ್ಟ 3 ವರ್ಷ ಪಾಲನೆ ಮಾಡಿ ಬೆಳೆದರೆ ಅವುಗಳು ನೂರಾರು ವರುಷ ನಮ್ಮ ಪರಿಸರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ನಾಶದಿಂದಾಗಿ ಮಳೆ ಸರಿಯಾಗಿ ಬಾರದೆ ನೀರಿಗೆ ತೊಂದರೆಯಾಗಿದೆ. ಹೀಗಾಗಿ ಎಲ್ಲರೂ ಗಿಡ ಬೆಳೆಸುವ ಉದ್ದೇಶ ಹೊಂದಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ. ಪರಿಸರ, ಸಾಹಿತ್ಯ ಮತ್ತು  ಜಲ ಸಂಪತ್ತು ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುಹಮ್ಮದ್ ಅಶ್ರಫ್ ವಹಿಸಿದ್ದರು. ಮಕ್ಕಳ ತಜ್ಞ ಡಾ.ಮನೋಹರ್ ಬೋಳೂರು, ಪರಿಸರ ಪ್ರೇಮಿ ರಾಘವೇಂದ್ರ ಪ್ರಭು ಕರ್ವಾಲು, ಸುವರ್ಣ ಎಂಟರ್ಪ್ರೈಸಸ್ ಮಾಲಕರಾದ ಮಧುಸೂಧನ್ ಹೇರೂರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದಯ್ ಕಿರಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು ಮತ್ತು ಸಾರ್ವಜನಿಕರಿಗೆ ಗಿಡ ವಿತರಿಸಲಾಯಿತು.

Similar News