ಜೂನ್ 17ರಂದು ಉಡುಪಿ ಜಿಲ್ಲೆಯ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ
ಉಡುಪಿ, ಜೂ.15: ಜಿಲ್ಲೆಯ ಗ್ರಾಮಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಅವಧಿಗೆ ಮೀಸಲಾತಿ ಯನ್ನು ನಿಗದಿಪಡಿಸುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.
ಜೂನ್ 17ರಂದು ಬೆಳಗ್ಗೆ 10:30ಕ್ಕೆ ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು ಸಮೀಪದ ಹೋಟೆಲ್ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ, ಜೂ. 19ರಂದು ಬೆಳಗ್ಗೆ 10:30ಕ್ಕೆ ಹೆಬ್ರಿ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಹೆಬ್ರಿ ಶ್ರೀಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ, ಜೂ.20 ರಂದು ಬೈಂದೂರು ತಾಲೂಕಿನ ಗ್ರಾಮಪಂಚಾಯತ್ ಸದಸ್ಯರು ಬೆಳಗ್ಗೆ 10:30ಕ್ಕೆ ಬೈಂದೂರು ಬಂಟರ ಭವನದಲ್ಲಿ ಸಭೆ ನಡೆಸುವರು.
ಕುಂದಾಪುರತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಅಪರಾಹ್ನ 3:30ಕ್ಕೆ ಕೋಟೇಶ್ವರದ ಯುವ ಮೆರೆಡಿಯನ್‌ನಲ್ಲಿ, ಕಾಪು ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಜೂ.22ರಂದು ಬೆಳಗ್ಗೆ 10:30ಕ್ಕೆ ಕಾಪು ಲಕ್ಷ್ಮೀ ಜನಾರ್ಧನ ಸಭಾಭವನದಲ್ಲಿ ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಜೂ.23ರಂದು ಬೆಳಗ್ಗೆ 10:30ಕ್ಕೆ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಹಾಗೂ ಅಪರಾಹ್ನ 3:30ಕ್ಕೆ ಉಡುಪಿ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ತಪ್ಪದೇ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.