ಕಾಟಿಪಳ್ಳ: ಸಿವೈಸಿ ವತಿಯಿಂದ ಉಚಿತ ಪುಸ್ತಕ ವಿತರಣೆ
Update: 2023-06-16 20:46 IST
ಮಂಗಳೂರು: ಕೆನರಾ ಯೂತ್ ಕೌನ್ಸಿಲ್ (ಸಿವೈಸಿ) ಕಾಟಿಪಳ್ಳ ಇದರ ವತಿಯಿಂದ 40ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಕಾಟಿಪಳ್ಳ 2ನೇ ಬ್ಲಾಕ್‌ನ ಸರಕಾರಿ ಶಾಲೆಯ ಆವರಣದಲ್ಲಿ ನಡೆಯಿತು.
ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಹಿತಿ ಹುಸೈನ್ ಕಾಟಿಪಳ್ಳ, ಕಾಟಿಪಳ್ಳ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ದಿನೇಶ್ ಶೇಟ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಮ್ಮದ್ ಸಮೀರ್, ಸಿವೈಸಿ.ಗ್ಲೋಬಲ್ ಸದಸ್ಯರಾದ ಆಸಿಫ್, ಶಬ್ಬೀರ್, ಮಾಜಿ ಅಧ್ಯಕ್ಷ ಹಬೀಬ್ ಕಾಟಿಪಳ್ಳ ಭಾಗವಹಿಸಿದ್ದರು.
ಸಿವೈಸಿ ಅಧ್ಯಕ್ಷ ನಾಸರ್ ಹಸನ್, ಉಪಾಧ್ಯಕ್ಷ ಸವಾಝ್, ಪ್ರಧಾನ ಕಾರ್ಯದರ್ಶಿ ಜಮ್ಶೀದ್, ಕೋಶಾಧಿಕಾರಿ ಕಾಸಿಮ್, ಉಪಸ್ಥಿತರಿದ್ದರು. ಸಂಚಾಲಕ ಸಲೀಂ ರಝಾಕ್ ಶ್ಯಾಡೊ ಸ್ವಾಗತಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ಅಶ್ರಫ್ ತಾಜ್ ಫಿಶ್ ನಿರೂಪಿಸಿದರು