×
Ad

ದ.ಕ. ಜಿಲ್ಲೆಯಲ್ಲಿ ಮುಂಗಾರು ದುರ್ಬಲ: ಹವಾಮಾನ ಇಲಾಖೆ

Update: 2023-06-16 21:14 IST

ಮಂಗಳೂರು, ಜೂ.16: ದ.ಕ.ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಮುಂಗಾರು ದುರ್ಬಲಗೊಂಡಿದ್ದು, ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಒಂದು ವಾರ ದುರ್ಬಲ ಮುಂಗಾರು ಮುಂದುವರಿಯಲಿದೆ.

ಶುಕ್ರವಾರ ದ.ಕ.ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣವಿತ್ತು. ಶನಿವಾರವೂ ಇದು ಮುಂದುವರಿ ಯಲಿದೆ. ಜೂನ್ 21ರ ಬಳಿಕ ರಾಜ್ಯದ ಕರಾವಳಿ ಭಾಗಗಳಲ್ಲಿ ಮುಂಗಾರು ಸ್ವಲ್ಪ ಚುರುಕಾಗುವ ಸಾಧ್ಯತೆಯಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 10.1 ಮಿ.ಮಿ ಮಳೆ ದಾಖಲಾಗಿದೆ. ಸರಾಸರಿ 32.2 ಡಿಗ್ರಿ ಗರಿಷ್ಠ, 25.1 ಕನಿಷ್ಟ ಉಷ್ಣಾಂಶ ದಾಖಲಾಗಿದೆ.

*ಗುರುವಾರ ರಾತ್ರಿ ಹಾಗೂ ಶುಕ್ರವಾರ ಕಡಲಬ್ಬರ ತುಸು ಇಳಿಕೆಯಾಗಿದೆ. ಆದಾಗ್ಯೂ ಮುಂದಿನ 24 ಗಂಟೆ ಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ಕಿಮೀನಿಂದ 45 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Similar News