×
Ad

ಅರ್ಥಶಾಸ್ತ್ರದಲ್ಲಿ ಮೋದಿ ಅನಕ್ಷರಸ್ಥ, ಮಣಿಪುರ ಬಿಜೆಪಿ ಸರಕಾರ ವಜಾಗೊಳಿಸಿ: ಸುಬ್ರಮಣಿಯನ್‌ ಸ್ವಾಮಿ ಸರಣಿ ಟ್ವೀಟ್

Update: 2023-06-17 23:06 IST

ಹೊಸದಿಲ್ಲಿ,ಜೂ.17: ಮಣಿಪುರ ಹಿಂಸಾಚಾರ  ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಕುರಿತಂತೆ ಕೇಂದ್ರ ಸರಕಾರವನ್ನು ಟೀಕಿಸಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶನಿವಾರ ಮಾಡಿರುವ ಎರಡು ಟ್ವೀಟ್ಗಳು ಆಡಳಿತ ಪಕ್ಷಕ್ಕೆ ಮುಜುಗರವುಂಟು ಮಾಡಿದೆ.

ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ಕುಂಠಿತಕ್ಕಾಗಿ ಪ್ರಧಾನಿ ಮೋದಿಯವರನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಪ್ರಧಾನಿ ಅನಕ್ಷರಸ್ಥರೆಂದು ಅವರು ಕಟಕಿಯಾಡಿದ್ದಾರೆ.  

‘‘ಭಾರತೀಯ ಜಿಡಿಪಿಗೆ ಪ್ರತಿ ವರ್ಷ ಶೇ.10 ಬೆಳವಣಿಗೆಯನ್ನು ಸಾಧಿಸುವ ಸಾಮರ್ಥ್ಯವಿದೆ .ಇದರಿಂದ ಹತ್ತು ವರ್ಷಗಳೊಳಗೆ  ದೇಶದಲ್ಲಿನ ನಿರುದ್ಯೋಗ ಮತ್ತು ಬಡತನವನ್ನು ಕೊನೆಗೊಳಿಸಬಹುದಾಗಿದೆ. ಆದರೆ ವಿತ್ತ ಸಚಿವಾಲಯಕ್ಕೆ  ಆ ಬಗ್ಗೆ ಸುಳಿವೇ ಇಲ್ಲ  ಹಾಗೂ ಮೋದಿಯವರು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರಾಗಿದ್ದಾರೆ ’’ ಎಂದವರು ಟ್ವೀಟಿಸಿದ್ದಾರೆ.

ಮಣಿಪುರ ಹಿಂಸಾಚಾರದ ಬಗ್ಗೆಯೂ ಅವರು ಟ್ವೀಟ್ ಮಾಡಿದ್ದು, ‘‘ ಮಣಿಪುರದ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಡಳಿತ ಹೇರುವ ಸಮಯ ಬಂದಿದೆೆ. ಅಮಿತ್ ಶಾ ಅವರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಬೇಕಾಗಿದೆ ಎಂದವರು ಹೇಳಿದ್ದಾರೆ.

Similar News