×
Ad

​ಜೂ.24: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್‌ಗೆ ಸನ್ಮಾನ

Update: 2023-06-20 19:27 IST

ಮಂಗಳೂರು, ಜೂ.20: ನಮ್ಮೂರ ನಾಗರಿಕ ಸಮಿತಿಯ ವತಿಯಿಂದ ನೂತನ ಸ್ಪೀಕರ್ ಯುಟಿ ಅಬ್ದುಲ್ ಖಾದರ್ ಅಲಿ ಫರೀದ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವು ಜೂ.24ರ ಸಂಜೆ 6ಕ್ಕೆ ಬೋಳಿಯಾರ್‌ನ ಸ್ವಾಗತ ಅಡಿಟೋರಿಯಂನಲ್ಲಿ ನಡೆಯಲಿದೆ.

ನಾಗರಿಕ ಸಮಿತಿಯ ಅಧ್ಯಕ್ಷ ಮುಹಮ್ಮದ್ ಪಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಣಚೂರು ಸಮೂಹ ಸಂಸ್ಥೆಯ ಹಾಜಿ ಯು.ಕೆ. ಕಣಚೂರು ಮೋನು, ಕಾಂಗ್ರೆಸ್ ಮುಖಂಡರಾದ ಎಸಿ ಭಂಡಾರಿ, ಪ್ರಶಾಂತ್ ಕಾಜವ, ಸದಾಶಿವ ಉಳ್ಳಾಲ ಜಯರಾಮ ಶಾಂತ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ತಿಳಿಸಿದ್ದಾರೆ.

Similar News