×
Ad

ಮಂಗಳೂರು ಮನಪಾ ಆಯುಕ್ತರ ನೇಮಕಕ್ಕೆ ತಡೆ

Update: 2023-06-20 20:36 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನ್ಸೂರ್ ಅಲಿ ಅವರ ನೇಮಕ ಆದೇಶವನ್ನು ರಾಜ್ಯ ಸರಕಾರ ಮಾರ್ಪಾಡು ಮಾಡಿದೆ.

ಸೋಮವಾರ ಮನ್ಸೂರ್ ಅಲಿ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ನೇಮಕ ಗೊಳಿಸಿದ್ದರೆ ರಾತ್ರಿ ಅವರನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿ ವರ್ಗಾವಣೆಗೊಳಿಸಿ ಆದೇಶಿಸಿದೆ. ಇದರಿಂದ ಮಂಗಳೂರು ನಗರ ಪಾಲಿಕೆಯ ಆಯುಕ್ತ ಹುದ್ದೆ ಖಾಲಿಯಾಗಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತರಾಗಿದ್ದ ಡಾ.ಭಾಸ್ಕರ್ ಎನ್. ಅವರಿಗೆ ಮುಂಭಡ್ತಿ ನೀಡಿ ಸರಕಾರ ಜೂ.20ರಂದು ಆದೇಶ ಹೊರಡಿಸಿದೆ. ಆದರೆ ಅವರಿಗೆ  ಹೊಸ ಹುದ್ದೆಯನ್ನು ಸರಕಾರ ಇನ್ನಷ್ಟೇ ಸೂಚಿಸಬೇಕಿದೆ.

Similar News