×
Ad

​ಲ್ಯಾಪ್‌ಟಾಪ್, ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವು

Update: 2023-06-20 20:55 IST

ಮಂಗಳೂರು, ಜೂ.20: ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಬಸ್‌ನಲ್ಲಿ ಲ್ಯಾಪ್‌ಟಾಪ್ ಮತ್ತು ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವಾದ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿದೆ.

ಜೂ.15ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಂಜಿತ್ ಪ್ರಯಾಣಿಸಿದ್ದರು. ಲ್ಯಾಪ್‌ ಟಾಪ್ ಮತ್ತು ಪಾಸ್‌ಪೋರ್ಟ್ ಇದ್ದ ಬ್ಯಾಗ್‌ನ್ನು ಸೀಟಿನ ಮೇಲ್ಭಾಗದ ಕ್ಯಾರಿಯರ್‌ನಲ್ಲಿಟ್ಟಿದ್ದರು. ಮರುದಿನ ಬೆಳಗ್ಗೆ 8:30ಕ್ಕೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ನೋಡಿದಾಗ ಬ್ಯಾಗ್ ಕಳವಾಗಿತ್ತು. ಬಿ.ಸಿರೋಡ್‌ನಲ್ಲಿ ಇಳಿದ ಇಬ್ಬರು ಪ್ರಯಾಣಿಕರ ಮೇಲೆ ಗುಮಾನಿ ವ್ಯಕ್ತಪಡಿಸಿ ರಂಜಿತ್ ದೂರು ನೀಡಿದ್ದಾರೆ.

Similar News