ವಿಜಯಪುರ - ಮಂಗಳೂರು ಜಂಕ್ಷನ್ ನಡುವೆ ರೈಲು ಸೇವೆ ವಿಸ್ತರಣೆ
Update: 2023-06-21 20:14 IST
ಮಂಗಳೂರು, ಜೂ.21: ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ.
ವಿಜಯಪುರ - ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377) ರೈಲಿನ ಓಡಾಟವನ್ನು ಜುಲೈ 1,2023 ರಿಂದ ಆಗಸ್ಟ್ 31, 2023 ರವರೆಗೆ ವಿಸ್ತರಿಸಲಾಗಿದೆ.
ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07378) ಸಂಚಾರವನ್ನು 2 ಜುಲೈ 2023 ರಿಂದ ಸೆಪ್ಟೆಂಬರ್1, 2023 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.