×
Ad

ನರಿಂಗಾನ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಸ್ಪೀಕರ್ ಯು.ಟಿ.ಖಾದರ್‌ಗೆ ಸನ್ಮಾನ ಕಾರ್ಯಕ್ರಮ

Update: 2023-06-22 17:27 IST

ಕೊಣಾಜೆ: ನರಿಂಗಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಯು.ಟಿ.ಖಾದರ್ ಅವರ ಅನುದಾನದಲ್ಲಿ ಆದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ನೂತನ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ನರಿಂಗಾನ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನರಿಂಗಾನ ಪಂಚಾಯತ್ ಸಭಾಂಗಣದಲ್ಲಿ  ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಪಂಚಾಯತ್ ಹಾಗೂ ಊರಿನವರ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಅವರು  ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ನಾವು ಯಾವೆಲ್ಲ ಕೆಲಸವನ್ನು ಮಾಡಿಕೊಡುತ್ತೇವೆಂದು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮತದಾರರಿಗೆ ಮಾತನ್ನು ಕೊಟ್ಟಿದ್ದೇವೆಯಾ ಅದನ್ನು ಬಹುತೇಕವಾಗಿ ಈಡೇರಿಸಿ ಕೊಟ್ಟಿದ್ದೇವೆ, ಬಾಕಿ ಉಳಿದ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಿಕೊಡುತ್ತೇವೆ, ಸರಕಾರದ ಯೋಜನೆಯನ್ನು ಮನೆಮನೆಗೆ ಮುಟ್ಟಿಸುವಂತಹ ಯೋಜನೆ ಪಂಚಾಯತ್ ಸದಸ್ಯರು ಮತ್ತು ಸಂಘ ಸಂಸ್ಥೆಗಳದ್ದಾಗಿದೆ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲಜಾ ಶೆಟ್ಟಿ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ, ಪಂಚಾಯತ್ ಸದಸ್ಯರಾದ ಮುರಳೀಧರ ಶೆಟ್ಟಿ ಮೋರ್ಲ, ಸಿ.ಎಚ್ ರಹ್ಮಾನ್ ಚಂದಹಿತ್ಲು, ಸಲೀಮ್ ಪಟ್ಟೊಳಿಕೆ, ಲತೀಫ್ ಕಾಪಿಕಾಡು, ಶಾಂತಿ ಡಿಸೋಜ, ಸುಂದರ್ ಪೂಜಾರಿ, ಗಿರಿಜಾ, ಜಯಂತಿ, ಶೇಕಬ್ಬ,ತಾಹಿರಾ, ಸಾಬಿರಾ, ಜ್ಯೋತಿ ಡಿಸೋಜ ಹಾಗೂ ಪ್ರಮುಖರಾದ ಹನೀಫ್ ಚಂದಹಿತ್ಲು, ಪದ್ಮನಾಭ ನರಿಂಗಾನ, ಇಸ್ಮಾಯಿಲ್, ಐತಪ್ಪ ಶೆಟ್ಟಿ, ಜೋಸೆಫ್ ಕುಟಿನಾ ಮತ್ತು ಪಂಚಾಯತ್ ಸಿಬ್ಬಂದಿ, ಊರಿನವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಸ್ವಾಗತಿಸಿದರು,  ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ ಪ್ರಾಸ್ತವಿಕವಾಗಿ ಮಾತನಾಡಿ, ಸನ್ಮಾನ ಪತ್ರ ವಾಚಿಸಿದರು, ಸದಸ್ಯರಾದ ಮುರಳೀದರ್ ಶೆಟ್ಟಿ ಮೋರ್ಲ ವಂದಿಸಿದರು.

Similar News