×
Ad

ಅಶೋಕ್ ಜೋಗಿಗೆ ಪಿಎಚ್‌ಡಿ ಪದವಿ

Update: 2023-06-22 19:40 IST

ಉಡುಪಿ, ಜೂ.22: ‘ಭತ್ತ ಬೆಳೆಯ ಆರ್ಥಿಕ ವಿಶ್ಲೇಷಣೆ; ಕರ್ನಾಟಕ ರಾಜ್ಯದಲ್ಲಿ ಒಂದು ತುಲನಾತ್ಮಕ ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯವು ಅಶೋಕ್ ಜೋಗಿ ಅವರಿಗೆ ಪಿಎಚ್‌ಡಿ  ಪದವಿ ನೀಡಿ ಗೌರವಿಸಿದೆ.

ಅಶೋಕ್ ಜೋಗಿ ಎಂಬಿಎ ಮತ್ತು ಎಂ.ಫಿಲ್ ಸ್ನಾತಕೋತ್ತರ ಪದವಿ ಪಡೆದಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಸಮ್ಮೇಳನಗಳಲ್ಲಿ  ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರಸ್ತುತ ಇವರು ಬ್ಯಾರಿಸ್ ಸಮೂಹ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವ್ಯವಹಾರ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಇವರು ಕಲ್ಲಮಂಡ್ಕೂರು ಲಕ್ಷ್ಮಣ ಜೋಗಿ ಮತ್ತು ಲಕ್ಷ್ಮೀ ಜೋಗಿ ಅವರ ಪುತ್ರರಾಗಿದ್ದಾರೆ.

Similar News