ಹೈಕಮಾಂಡ್‌ ವಿರುದ್ಧ ಅಸಮಾಧಾನ; ಆರ್.ಬಿ.ತಿಮ್ಮಾಪುರ–ನಂಜಯ್ಯನಮಠ‌ ಅವರದ್ದು ಎನ್ನಲಾದ ಮಾತುಕತೆ ಆಡಿಯೊ ವೈರಲ್

Update: 2026-08-05 16:53 IST

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ

ಬಾಗಲಕೋಟೆ : ನೂತನ ಸಚಿವ ಸಂಪುಟ ವಿಸ್ತರಣೆ ಆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ವಿರುದ್ಧವೇ ಸ್ವಪಕ್ಷಿಯರಿಂದಲೇ ಆರೋಪ ಮಾಡಿರುವ ಆಡಿಯೋವೊಂದು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್.ಜಿ.ನಂಜಯ್ಯನಮಠ ಅವರದ್ದು ಎನ್ನಲಾದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.‌

ಸಂಭಾಷಣೆಯಲ್ಲಿ ಬಳ್ಳಾರಿಯ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼನಾಗೇಂದ್ರ ಅವರ ಮೇಲೆ ಕೇಸ್ ಇದ್ದರೂ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನಾವು ಯಾವ ರೀತಿಯಾಗಿ ಜನಕ್ಕೆ ಮುಖ ತೋರಿಸಬೇಕು. ಹಣ ಕೊಟ್ಟು ಸಚಿವ ಸ್ಥಾನ ನೀಡಲಾಗಿದೆʼ ಎಂದು ಮಾತುಕತೆ ಮಾಡಲಾಗಿದೆ.

ಅಲ್ಲದೆ, ಸಂಭಾಷಣೆಯಲ್ಲಿ ಎಚ್.ಕೆ.ಪಾಟೀಲ್‌ಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼಉತ್ತರ ಕರ್ನಾಟಕ ಪ್ರದೇಶದಲ್ಲಿ ಸಂಘಟನೆ ಮಾಡಿದ್ದೀರಿ, ನಿಮಗೆ ಸಚಿವ ಸ್ಥಾನ ನೀಡಬೇಕಿತ್ತುʼ ಎಂದು ಆರ್.ಬಿ.ತಿಮ್ಮಾಪುರ ಅವರನ್ನು ಉಲ್ಲೀಖಿಸಿ ಹೇಳಿದ್ದು ಆಡಿಯೋದಲ್ಲಿ ಇದೆ.

ಕಾಂಗ್ರೆಸ್ ಪಕ್ಷದ ವಿರುದ್ದವೇ ಮುಖಂಡರೇ ಅಸಮಾಧಾನ ಹೂರಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ. ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News