×
Ad

ಬಜಾಲ್: ನಜಾಹ್ ಫೌಂಡೇಶನ್ ಅಧೀನದಲ್ಲಿ ಮೊಹಲ್ಲಾ ಕ್ಲಿನಿಕ್ ಉದ್ಘಾಟನೆ, ಉಚಿತ ಅರೋಗ್ಯ ಶಿಬಿರ

Update: 2023-09-19 14:50 IST

ಮಂಗಳೂರು: ನಜಾಹ್ ಫೌಂಡೇಶನ್ ಇದರ ಅಧೀನದಲ್ಲಿ ಮೊಹಲ್ಲಾ ಕ್ಲಿನಿಕ್ ಉದ್ಘಾಟನೆ ಮತ್ತು ಉಚಿತ ಅರೋಗ್ಯ ಶಿಬಿರವು ಮಸ್ಜಿದುಲ್ ಖೈರ್ ಬಜಾಲ್ ಕಟ್ಟಪುಣಿ ಮಸೀದಿಯ ಸಭಾಂಗಣದಲ್ಲಿ ಆದಿತ್ಯವಾರದಂದು ನಡೆಯಿತು.

ಲೈಫ್ ಲೈನ್ ಹಾಗೂ ಲಿ ಒಪ್ಟಿಕೊ ಇದರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲಾನ ಝುಬೈರ್ ಅವರ ದುವಾ  ನೆರೆವೇರಿಸಿದರು. ಡಾ.ಮುಬಶ್ಶಿರ್ ಅವರು ಮಾತನಾಡಿ ಆರೋಗ್ಯದ ಕುರಿತು ಅರಿವು ಮೂಡಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಮೌಲಾನ ಫರ್ಹಾನ್ ಅವರು, ಪ್ರತೀ ಶುಕ್ರವಾರದಂದು ಮಸೀದಿ ವಠಾರದಲ್ಲಿ ಮೊಹಲ್ಲಾದ ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಮೀಝ್ ವಂದಿಸಿದರು.


ಕಾರ್ಯಕ್ರಮದಲ್ಲಿ ಡಾ. ಶಾಹಿಕ್ ಮತ್ತು ಡಾ.ಅಹದ್ ಮತ್ತಿತರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News