×
Ad

ನೂತನ ಜೈವಿಕ ಇಂಧನ ನೀತಿಯು ಸಮಗ್ರ ಬದಲಾವಣೆ ಅಭಿವೃದ್ಧಿಗೆ ಬುನಾದಿ : ಎಸ್.ಈ.ಸುಧೀಂದ್ರ

Update: 2025-08-11 22:57 IST

ಬೆಂಗಳೂರು, ಆ.11: ರಾಜ್ಯದ ಉದ್ದೇಶಿತ ನೂತನ ಜೈವಿಕ ಇಂಧನ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ 1ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದ್ದು, ಮೂರು ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳಕ್ಕೆ ಪ್ರೋತ್ಸಾಹ ದೊರೆಯಲಿ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ.ಸುಧೀಂದ್ರ ತಿಳಿಸಿದ್ದಾರೆ.

ಸೋಮವಾರ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಯು ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡೀಸೆಲ್ ಇಂಜಿನ್‍ನ ಪಿತಾಮಹ ಸರ್ ರುಡಾಲ್ಫ್ ಡೀಸೆಲ್ ಅವರ ನೆನಪಿನಲ್ಲಿ ಪ್ರಪಂಚದಾದ್ಯಂತ ಆ.10 ರಂದು ವಿಶ್ವ ಜೈವಿಕ ಇಂಧನ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ನೂತನ ಜೈವಿಕ ಇಂಧನ ನೀತಿಯಲ್ಲಿ ಪ್ರಸ್ತಾಪಿತ ಉದ್ದೇಶಗಳು ಭವಿಷ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಲಿದೆ. ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಕೊಡುಗೆಯು ರಾಷ್ಟ್ರವನ್ನು ವಿಶ್ವದಲ್ಲಿ ಮೂರನೇ ಆರ್ಥಿಕ ಸ್ಥಾನವನ್ನು ತಲುಪಲು ತನ್ನದೇ ಆದ ಕೊಡುಗೆಯನ್ನು ನೀಡಲಿದೆ. ಜೈವಿಕ ಇಂಧನ ನೀತಿಯ ಅನುಷ್ಠಾನದಲ್ಲಿ ಮಹತ್ತರ ಪಾತ್ರವಹಿಸಲಿರುವ ಬಂಡವಾಳ ಹೂಡಿಕೆದಾರರು ಬ್ಯಾಂಕರ್‍ಗಳ ನಿರೀಕ್ಷೆಗಳು, ಬಂಡವಾಳ ಹೂಡಿಕೆಗೆ ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಪ್ರೋ ತ್ಸಾಹಕ ಕ್ರಮಗಳ ಕುರಿತು ಸುಧೀಂದ್ರ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯ ಸಮಿತಿಯ ಸದಸ್ಯ ಡಾ.ಬಾಲಕೃಷ್ಣ ಗೌಡ, ರಾಜಾಜಿನಗರ ಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲ ಕೆ.ಸುರೇಶ್, ಹೆಚ್ಚುವರಿ ನಿರ್ದೇಶಕ ರವಿರಾಜ ದೊಡ್ಡಮನಿ, ಪಿಡಿಒಗಳಾದ ಆಶಾ, ಶೈಲಜಾ, ಮಹೇಶ್, ಭಾಗಶ್ರೀ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News