×
Ad

ಮನೆಗಳನ್ನು ಧ್ವಂಸಗೊಳಿಸಿದ ಪ್ರದೇಶಕ್ಕೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ನಿಯೋಗ ಭೇಟಿ

Update: 2025-12-27 23:53 IST

ಬೆಂಗಳೂರು : ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಮ್ ಲೇಔಟ್ ಗಳಲ್ಲಿ ಕಳೆದ 30 ವರ್ಷಗಳಿಂದ ಆಶ್ರಯ ಕಂಡುಕೊಂಡಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ, ಬುಲ್ಡೋಜರ್ಸ್ ಮೂಲಕ ಏಕಾಏಕಿ ಧ್ವಂಸಗೊಳಿಸಲಾಗಿದ್ದು, ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿ ಆಯಿಶಾ ಶಬೀರ್ ನೇತೃತ್ವದ ತಂಡ ಆ ಪ್ರದೇಶಗಳಿಗೆ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯಿಶಾ ಶಬೀರ್, ಸರಕಾರದ ಈ ಆದೇಶವು ಅತ್ಯಂತ ಅಮಾನವೀಯವಾಗಿದೆ. ಸಣ್ಣ ಮಕ್ಕಳು, ಮಹಿಳೆಯರು, ಗರ್ಭಿಣಿಯರು ಇರುವ ಕುಟುಂಬಗಳನ್ನು ಪೂರ್ವ ಸೂಚನೆ ಇಲ್ಲದೆ ಬೀದಿಪಾಲು ಮಾಡಿರುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರು ನಿಷ್ಪ್ರಯೋಜಕರು ಎಂದು ಹೇಳಿದರು.

ತಮ್ಮ ಕನಸು, ಸೂರು, ಸುರಕ್ಷತೆಯನ್ನು ಕಳೆದುಕೊಂಡಿರುವ ಕುಟುಂಬಗಳೊಂದಿಗೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ಸದಾ ಜೊತೆಯಾಗಿರುತ್ತದೆ. ಈ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಆ ಕುಟುಂಬಗಳ ಧ್ವನಿಯಾಗಲು ನಾವು ತಯಾರಿದ್ದೇವೆ. ಅವರ ಜೀವನವನ್ನು ಆತ್ಮವಿಶ್ವಾಸದೊಂದಿಗೆ, ಭರವಸೆಯೊಂದಿಗೆ ಮತ್ತೆ ರೂಪಿಸಿಕೊಳ್ಳಲು ನಮ್ಮ ತಂಡದ ಸಹಕಾರ ಯಾವತ್ತೂ ಇರಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News