ಹೇಬಾಲ್ ಚಾಂಪಿಯನ್‌ಶಿಪ್; ಬೆಂಗಳೂರಿನ ಮುಸ್ತಫಾ ಅಹ್ಮದ್‌ಗೆ ರಜತ ಪದಕ

Update: 2026-07-30 01:06 IST

ಬೆಂಗಳೂರು : ಬೆಂಗಳೂರಿನ ಹದಿಮೂರು ವರ್ಷದ ಮುಹಮ್ಮದ್ ಮುಸ್ತಫಾ ಅಹ್ಮದ್, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಹೇಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಗೆದ್ದು ದೇಶದ ಭರವಸೆಯ ಕ್ಯೂ ಸ್ಪೋರ್ಟ್ಸ್ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ವಿಶೇಷವೆಂದರೆ, ತಮ್ಮ ಮೊದಲ ಪ್ರಮುಖ ಹೇಬಾಲ್ ಟೂರ್ನಿಯಲ್ಲಿ ಮುಸ್ತಫಾ ಅವರು ಮತ್ತೊಬ್ಬ ಆಟಗಾರನಿಂದ ಎರವಲು ಪಡೆದ ಕ್ಯೂ ಬಳಸಿ ಈ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕ ಜೂನಿಯರ್ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಚಾಂಪಿಯನ್ ಆಗಿರುವ ಮುಸ್ತಫಾ, ಜೂನಿಯರ್ ಸ್ನೂಕರ್‌ನಲ್ಲಿ 5ನೇ ಶ್ರೇಯಾಂಕ ಹೊಂದಿದ್ದಾರೆ.

2026ರ ಮೇನಲ್ಲಿ ಬೆಂಗಳೂರಿನ ಹೇಬಾಲ್ ಅಕಾಡಮಿಗೆ ಸೇರಿ ಕೋಚ್ ಪ್ರಣೀತ್ ರಾಮಚಂದಾನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಮುಸ್ತಫಾ ಅವರು, ಭಾರತದ ಮೊದಲ ಕ್ರಿಸ್ ಹೆನ್ರಿ ಪ್ಲೇಯರ್ ಇಂಟೆನ್ಸಿವ್ ಟ್ರ್ರೈೆನಿಂಗ್ ಪ್ರೋಗ್ರಾಂಗೂ ಆಯ್ಕೆಯಾಗಿ ಅಂತರ್‌ರಾಷ್ಟ್ರೀಯ ಕೋಚ್ ಕ್ರಿಸ್ ಹೆನ್ರಿ ಅವರಿಂದ ತರಬೇತಿ ಪಡೆದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಹಲವು ಅನುಭವಿ ಆಟಗಾರರನ್ನು ಮಣಿಸಿ ಫೈನಲ್ ಪ್ರವೇಶಿಸಿದ ಮುಸ್ತಫಾ ಬೆಳ್ಳಿ (ರಜತ) ಪದಕ ಗೆದ್ದರು. ಈ ಸಾಧನೆಗೆ ತಂದೆ ಸಜ್ಜಾದ್ ಅಹ್ಮದ್‌ರ ಪ್ರೋತ್ಸಾಹ ಹಾಗೂ ಕೋಚ್ ಪ್ರಣೀತ್‌ರ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ, ಏಷ್ಯನ್ ಹಾಗೂ ವಿಶ್ವಮಟ್ಟದಲ್ಲಿ ಮಿಂಚುವುದು ಮುಸ್ತಫಾರ ಗುರಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News