×
Ad

ಲೋಕಾಯುಕ್ತ ದಾಳಿ; ರಾಜ್ಯದ 12 ಸರಕಾರಿ ಅಧಿಕಾರಿಗಳ ಬಳಿ ಕೋಟ್ಯಂತರ ರೂ.ಮೌಲ್ಯದ ಸಂಪತ್ತು ಪತ್ತೆ

Update: 2025-10-14 22:16 IST

ಬೆಂಗಳೂರು, ಅ.14: ನಿಗದಿತ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ರಾಜ್ಯದ 12 ಸರಕಾರಿ ಅಧಿಕಾರಿಗಳಿಗೆ ಸೇರಿದಂತಹ ನಿವಾಸ ಸೇರಿದಂತೆ ಒಟ್ಟು 48 ಸ್ಥಳಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಮಂಗಳವಾರ ಮುಂಜಾನೆ ಬೆಂಗಳೂರಿನ ಮಲ್ಲಸಂದ ಹೆರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ ಅವರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಒಂದು ನಿವೇಶನ, ವಾಸದ ಮನೆ, ಚಿನ್ನಾಭರಣ, ವಾಹನ ಸೇರಿದಂತೆ ಒಟ್ಟು 3,24,13,240 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅಮಾನತ್ತಿನಲ್ಲಿರುವ ಹೊಸಕೆರೆಹಳ್ಳಿಯ ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶಕಿ ವಿ.ಸುಮಂಗಳಾ ಅವರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 7,32,50,200 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೆಂಗಳೂರಿನ ಕೆಐಎಡಿಬಿ ಸರ್ವೆಯರ್ ಎನ್.ಕೆ.ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 4,66,55,512 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಚಿತ್ರದುರ್ಗದ ಹೊಳಲಕೆರೆ ಕೃಷಿ ಸಹಾಯಕ ನಿರ್ದೇಶಕ ಎನ್.ಚಂದ್ರಶೇಖರ್‍ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 4,02,00,000 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ದಾವಣಗೆರೆ ಕೆಆರ್‍ಐಡಿಎಲ್ ಸಹಾಯಕ ಅಭಿಯಂತರ ಜಗದೀಶ್ ನಾಯ್ಕ್ ಸೇರಿದ ಒಟ್ಟು 5 ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 2,04,54,125 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ದಾವಣಗೆರೆಯ ಹಿರಿಯ ಸಹಾಯಕ ಬಿ.ಎಸ್.ನಡುವಿನ ಮನೆಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 2,30,54,684 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಸವಣೂರು ತಾಲೂಕು ಪಂಚಾಯಿತಿಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬಸವೇಶ ಶಿವಪ್ಪ ಶಿಡೆನೂರಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 1,67,18,729 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ರಾಣೆಬೆನ್ನೂರು ರಾಜಸ್ವ ನಿರೀಕ್ಷಕ ಅಶೋಕ್ ಶಂಕರಪ್ಪ ಅರಳೇಶ್ವರ್‍ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 2,25,96,462 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ತೋಟಗಾರಿಕೆ ಇಲಾಖೆ ಔರದ್ ಸಹಾಯಕ ನಿರ್ದೇಶಕ ಧೂಳಪ್ಪಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 3,39,35,500 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಉಡುಪಿ ಆರ್‍ಟಿಓ ಲಕ್ಷ್ಮೀನಾರಾಯಣ ಪಿ ನಾಯಕ್‍ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 2,21,14,234 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಎಆರ್‍ಬಿಸಿ ವಿಭಾಗ-2, ಕಮಟಗಿಯ ಕೆಬಿಜೆಎನ್‍ಎಲ್ ಕಿರಿಯ ಅಭಿಯಂತರ ಚೇತನ್‍ಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 1,67,28,774 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಹಾಸನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಫ್‍ಡಿಎ ಜ್ಯೋತಿ ಮೇರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 2,17,47,763 ಮೌಲ್ಯದ ಆಸ್ತಿ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News