ಬ್ಯಾರಿ ಕವಿಗೋಷ್ಠಿ | ಸಮಾಜದಲ್ಲಿ ಕವಿಗಳು ಮೌನವಾಗಿರಬಾರದು : ಮುಹಮ್ಮದ್ ಬಡ್ಡೂರು
Update: 2026-02-02 00:12 IST
ಬೆಂಗಳೂರು : ಜಗತ್ತಿನಲ್ಲಿ ದಬ್ಬಾಳಿಕೆ ನಡೆದಾಗ ಆಗ ಕ್ರಾಂತಿ ತಂದಿರುವುದೇ ಸಾಹಿತ್ಯ. ಸಾಹಿತಿಗಳ ಧೈರ್ಯವಂತರಾಗಿರಬೇಕು. ಸಮಾಜದ ಅವ್ಯವಸ್ಥೆ, ಆಡಳಿತ ಅಭದ್ರತೆಯ ಕುರಿತು ಮಾತನಾಡುವಂತಹ ಸಾಹಿತಿಗಳಾಗಬೇಕೆಂದು ಕವಿಗಳಿಗೆ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಕರೆ ನೀಡಿದ್ದಾರೆ.
ಬಶೀರ್ ಅಹ್ಮದ್ ಕಿನ್ಯ, ಹೈದರ್ ಕಾಟಿಪಳ್ಳ, ಹುಸೈನ್ ಕಾಟಿಪಳ್ಳ, ಹಂಝ ಮಲಾರ್, ಹಫ್ಸಾ ಭಾನು, ಆಶ್ರಫ್ ಅಪೋಲೋ ಕಲ್ಲಡ್ಕ, ರಶೀದ್ ನಂದಾವರ, ರಫೀಕ್ ಪಾಣೇಲ, ಹನೀಫ್ ನಂದರಬೆಟ್ಟು, ಯಂಶ ಬೇಂಗಿಲ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಇಬ್ರಾಹಿಂ ಖಲೀಲ್ ಬನ್ನೂರು ಸ್ವ-ರಚಿತ ಬ್ಯಾರಿ ಕವಿತೆ ವಾಚಿಸಿದರು. ವೇದಿಕೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಉಪಸ್ಥಿತರಿದ್ದರು.