×
Ad

‘ಆರೋಗ್ಯ ಸಂಜೀವಿನಿ ಯೋಜನೆ’ಗೆ 70 ಖಾಸಗಿ ಆಸ್ಪತ್ರಗಳ ನೋಂದಣಿ

Update: 2025-10-16 19:59 IST

ಬೆಂಗಳೂರು, ಅ.16: ಇಲ್ಲಿನ ನಾರಾಯಣ ಸೂಪರ್ ಸ್ಪೆಷೆಲಿಟಿ ಹಾಸ್ಪಿಟಲ್ಸ್, ಆಕ್ಸ್‌ ಫರ್ಡ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ಸೇರಿ ರಾಜ್ಯದ 70 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿದೆ.

ಗುರುವಾರದಂದು ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ನ ವಿವಿಧ ಯೋಜನೆಯಡಿಯಲ್ಲಿ ನೊಂದಾಯಿತಗೊಂಡಿರುವ ಖಾಸಗಿ ಆಸ್ಪತ್ರೆಗಳನ್ನು ‘ಭಾವಿತ ನೊಂದಾವಣಿ’ ಎಂದು ಪರಿಗಣಿಸಲಾಗುತ್ತದೆ. ಈಗಾಗಲೇ 186 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿದೆ ಎಂದಿದೆ.

ಆಸ್ಪತ್ರೆಗಳು ಹೊಂದಿರಬೇಕಾದ ಮೂಲ ಸೌಕರ್ಯಗಳು ಹಾಗೂ ಇತರೆ ಮಾನದಂಡಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿಕೊಂಡು, ಆಸ್ಪತ್ರೆಗಳೊಂದಿಗೆ ಸೂಕ್ತ ಒಪ್ಪಂದ ಮಾಡಿಕೊಳ್ಳುವ ಷರತ್ತಿಗೊಳಪಟ್ಟ 70 ಖಾಸಗಿ ಆಸ್ಪತ್ರೆಗಳನ್ನು ಇದೀಗ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News