×
Ad

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ 7.25 ಕೋಟಿ ರೂ.

Update: 2025-07-11 23:38 IST

ಬೆಂಗಳೂರು : ರಾಜ್ಯ ಸರಕಾರವು ಸಾಂಕ್ರಾಮಿಕ ರೋಗಗಳಾದ ಚಿಕುನ್ ಗುನ್ಯಾ, ಡೆಂಗಿ ಖಾಯಿಲೆಗಳ ನಿಯಂತ್ರಣಕ್ಕಾಗಿ ಮಾನವ ಸಂಪನ್ಮೂಲ ಬಳಕೆ, ಕೀಟನಾಶಕಗಳ ಬಳಕೆ ಮತ್ತು ಕಿಟ್‌ಗಳ ಖರೀದಿಗಾಗಿ 7.25 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಿದೆ.

ಸಾಂಕ್ರಾಮಿಕ ರೋಗಗಳಾದ ಚಿಕುನ್ ಗುನ್ಯಾ, ಡೆಂಗಿ ಖಾಯಿಲೆಗಳ ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೀಟ ಸಂಗ್ರಹಕಾರರ ನೇಮಕಾತಿ, ಈಡಿಸ್ ಲಾರ್ವಾ ನಿರ್ಮೂಲನಾ ಚಟುವಟಿಕೆಗಾಗಿ ಸ್ವಯಂ ಸೇವಕರ ಸೇವೆಯ ಬಳಕೆ, ಡೆಂಗಿ ಪ್ರಕರಣಗಳ ಶೀಘ್ರ ಪತ್ತೆಗಾಗಿ ಎಲಿಸಾ ಕಿಟ್‌ಗಳ ಖರೀದಿ, ಇತ್ಯಾದಿ ಪ್ರಮುಖ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಅನುದಾನ ಬಳಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News