×
Ad

ಆಶಾ ಕಿರಣ ಯೋಜನೆಯ ಸಮಗ್ರ ಮೌಲ್ಯಮಾಪನ ನಡೆಸಲು ಮುಂದಾದ WHO

Update: 2025-07-02 23:38 IST

                                                                PC :WHO 

ಬೆಂಗಳೂರು : ಸಾರ್ವತ್ರಿಕ ಕಣ್ಣಿನ ಆರೋಗ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕರ್ನಾಟಕ ಸರಕಾರ ಜಾರಿಗೆ ತಂದ ಆಶಾ ಕಿರಣ ಯೋಜನೆಯನ್ನು ಸಮಗ್ರ ಮೌಲ್ಯಮಾಪನ ನಡೆಸಲು ಮುಂದಾಗಿದೆ.

ಬುಧವಾರದಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ.ರೊಡಿರಿಕೊ ಎಚ್. ಆಫ್ರಿನ್ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಪತ್ರ ಬರೆದಿದ್ದು, ರಾಜ್ಯ ಸರಕಾರ ಆಶಾ ಕಿರಣ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳಲ್ಲೂ ಈ ಯೋಜನೆ ಅನುಷ್ಠಾನ ಸಂಬಂಧ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ.

ಸಮಗ್ರ ಕಣ್ಣಿನ ಆರೈಕೆಗಾಗಿ ಆಶಾ ಕಿರಣ ಮಾದರಿ ಯೋಜನೆಯಾಗಿದ್ದು, ಮನೆ ಬಾಗಿಲಿನಲ್ಲಿ ಕಣ್ಣಿನ ಆರೈಕೆ ಎಂಬ ಆಶಾ ಕಿರಣ ಪರಿಕಲ್ಪನೆ ಅನುಕರಣೀಯವಾಗಿದೆ. ಈ ನವೀನ ಮಾದರಿಯು, ಕುರುಡುತನವನ್ನು ತೊಡೆದುಹಾಕುವ ಮತ್ತು ರಾಜ್ಯಾದ್ಯಂತ ಸಮಗ್ರ ಕಣ್ಣಿನ ಆರೈಕೆ ಸೇವೆಗಳಿಗೆ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News