‘ಶೇ.56ರಷ್ಟು ಮೀಸಲಾತಿ’ ಹಿರಿಯ ವಕೀಲರೊಂದಿಗೆ ಕೆ.ಎಚ್.ಮುನಿಯಪ್ಪ ಚರ್ಚೆ
ಹೊಸದಿಲ್ಲಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.56ರಷ್ಟು ಮೀಸಲಾತಿಯ ಪ್ರಮಾಣವನ್ನು ಪಡೆಯುವ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತು ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಶನಿವಾರ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿಯವರನ್ನು ಭೇಟಿ ಮಾಡಿ ಮೀಸಲಾತಿಯ ವಿಷಯಗಳ ಕುರಿತು ಚರ್ಚಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.56ರಷ್ಟು ಮೀಸಲಾತಿಯ ಪ್ರಮಾಣವು ರಾಜ್ಯ ಸರಕಾರ ತೀರ್ಮಾನ ಮಾಡಿ ವಿಂಗಡಿಸಿದ್ದು ಈ ಮೀಸಲಾತಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಸುಪ್ರೀಂಕೋರ್ಟ್ನಲ್ಲಿ ಮೀಸಲಾತಿಯ ರಿಟ್ ಅರ್ಜಿಯನ್ನು ಸಲ್ಲಿಸಿದೆ.
ಪರಿಶಿಷ್ಟ ಜಾತಿ(ಶೇ.17), ಪರಿಶಿಷ್ಟ ಪಂಗಡ(ಶೇ.7)ದ ಜನಸಂಖ್ಯೆಯ ಅನುಸಾರವಾಗಿ ಮೀಸಲಾತಿ ನೀಡಬೇಕು. ಈ ಈಗಾಗಲೇ ಛತ್ತೀಸ್ಗಢ ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯ ಒದಗಿಸಿದ್ದು, ನಮ್ಮ ರಾಜ್ಯಕ್ಕೂ ಈ ಮೀಸಲಾತಿಯ ನ್ಯಾಯವನ್ನು ಕೊಡಿಸುವ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡನೆ ಮಾಡುವ ಕುರಿತು ಮುನಿಯಪ್ಪ ಚರ್ಚೆ ನಡೆಸಿದರು.