ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಕೇರಳಂ ಮೂಲದ ವ್ಯಕ್ತಿಯೊಬ್ಬರ ಪಾತ್ರವಿದ್ದು, ಆ ವ್ಯಕ್ತಿಗೆ ಎರಡು ಬಾರಿ ನೋಟೀಸ್ ನೀಡಿದರೂ, ವಿಚಾರಣೆಗೆ ಹಾಜರಾಗಿಲ್ಲ. ಈಗ ಮತ್ತೊಮ್ಮೆ ನೋಟೀಸ್ ಕೊಡಲಾಗಿದೆ ಎಂದು ಸೈಬರ್ ಪೊಲೀಸರು ಹೇಳಿದ್ದಾರೆ.

ಕೇರಳಂ ಮೂಲದ ವ್ಯಕ್ತಿಯೊಬ್ಬರು ಕೃಪಾ ಆಳ್ವಾ ಸಂಪರ್ಕದಲ್ಲಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಈ ವ್ಯಕ್ತಿ ಮೂಲಕವೇ ಸ್ಟಿಂಗ್ ಕಾರ್ಯಾಚರಣೆಯ ವಿಡಿಯೋದಲ್ಲಿದ್ದ ಮಹಿಳೆಯು ಕೃಪಾ ಆಳ್ವಾ ಅವರನ್ನು ಸಂಪರ್ಕಿಸಿದ್ದಳು ಎಂಬುವುದು ಗೊತ್ತಾಗಿದೆ.

ಕೃಪಾ ಆಳ್ವಾ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷಯಾಗಿದ್ದಾಗ, ಅವರ ಕಚೇರಿಯಲ್ಲಿ ಕೇರಳಂನ ವ್ಯಕ್ತಿ ಅನುವಾದಕಾರನಾಗಿ ಕೆಲಸ ಮಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅನಿಲ್/ವಾರ್ತಾಭಾರತಿ

ಬೆಂಗಳೂರು ವರದಿಗಾರರು