ಬೆಂಗಳೂರು: ಸೆ.4ರಿಂದ 6ರವರೆಗೆ ನಡೆಯಲಿರುವ ‘ಅಕ್ಕ’ ರಜತಮಹೋತ್ಸವ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮಿತಿ ಆಯೋಜಿಸಿದ್ದ ಕವನ ಹಾಗೂ ಸಣ್ಣ ಕಥಾ ಸ್ಪರ್ಧೆಯ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಿ ಘೋಷಿಸಿದ್ದಾರೆ.

ಭಾರತದ ವಿವಿಧ ರಾಜ್ಯಗಳಲ್ಲದೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರು ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬರಹಗಳನ್ನು ಸಲ್ಲಿಸಿದ್ದರು. ಉತ್ತಮ ಗುಣಮಟ್ಟದ ಕವನ ಹಾಗೂ ಸಣ್ಣ ಕಥೆಗಳು ಸಲ್ಲಿಕೆಯಾಗಿದ್ದರಿಂದ ವಿಜೇತರ ಆಯ್ಕೆ ತೀರ್ಪುಗಾರರಿಗೆ ಸವಾಲಿನ ಪ್ರಕ್ರಿಯೆಯಾಗಿತ್ತು ಎಂದು ಸಾಹಿತ್ಯ ಸಮಿತಿ ತಿಳಿಸಿದೆ.

ಕವನ ಸ್ಪರ್ಧೆಯಲ್ಲಿ ʼಪಂಜರದ ಗಿಣಿʼ ಕವನಕ್ಕೆ ಕಾಸರಗೋಡಿನ ಹರ್ಷಿತ ಎಸ್. ಪ್ರಥಮ ಬಹುಮಾನ ಪಡೆದಿದ್ದಾರೆ. ಸಣ್ಣ ಕಥಾ ಸ್ಪರ್ಧೆಯಲ್ಲಿ ʼಕೊನೆಯ ಡೆಲಿವರಿʼ ಕಥೆಗೆ ಬೆಂಗಳೂರಿನ ರವಿ ಮಡೋಡಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಥಮ ಮೂರು ಬಹುಮಾನ ಪಡೆದ ವಿಜೇತರ ಬರಹಗಳನ್ನು ‘ಅಕ್ಕ’ ರಜತಮಹೋತ್ಸವದ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಹಾಗೂ ವಿಜೇತರನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ಸಾಹಿತ್ಯ ಸಮಿತಿ ಧನ್ಯವಾದ ಸಲ್ಲಿಸಿದೆ. ವಿಜೇತರ ಬಹುಮಾನಗಳಿಗೆ ಪ್ರಾಯೋಜಕತ್ವ ನೀಡಿದ ಜಯನಗರದ ‘ಟೋಟಲ್ ಕನ್ನಡ ಡಾಟ್ ಕಾಮ್’ ಸಂಸ್ಥೆಗೂ ಕೃತಜ್ಞತೆ ಸಲ್ಲಿಸಿ, ವಿಜೇತರಿಗೆ ಅಭಿನಂದನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor