×
Ad

ಆನೇಕಲ್: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-02-25 09:51 IST

ಆನೇಕಲ್, ಫೆ.25: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾದ ಘಟನೆ ಆನೆಕಲ್ಲಿನ ಕಾಳನಾಯಕನಹಳ್ಳಿ ಬಳಿ ನಡೆದಿದೆ.

ಉತ್ತರಾಖಂಡ ರಾಜ್ಯ ಮೂಲದ ಹರ್ಷಿತ್ ಕೊಂಟಾಳ ಕೊಲೆಯಾದ ಯುವಕ. ಇವರು ಬೆಂಗಳೂರು ಹೊರ ವಲಯದ ಆನೇಕಲ್ ಪಟ್ಟಣದಲ್ಲಿರುವ ಅಲಯನ್ಸ್ ಕಾಲೇಜಿನ ಬಿ ಟೆಕ್ ವಿದ್ಯಾರ್ಥಿಯಾಗಿದ್ದರು. ಅವರ ಮೃತದೇಹ ಇಂದು ಬೆಳಗ್ಗೆ ಕಾಳನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸ್ಟೆಲ್ ನಲ್ಲಿದ್ದುಕೊಂಡು ಕಲಿಯುತ್ತಿದ್ದ ಹರ್ಷಿತ್ ಕೊಂಟಾಳ ಫೆ.22ರಂದು ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇಂದು ಬೆಳಗ್ಗೆ ಹರ್ಷಿತ್ ಕೊಂಟಾಳ ಅವರ ಮೃತದೇಹ ಕೊಲೆಗೈದು ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಕಾಲೇಜು ಬ್ಯಾಗ್ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News