×
Ad

ವಿಜಯಪುರ : ಮಾರಕಾಸ್ತ್ರಗಳಿಂದ ಕೊಚ್ಚಿ ಕುಖ್ಯಾತ ರೌಡಿ ಬಾಗಪ್ಪ ಹರಿಜನ ಹತ್ಯೆ

Update: 2025-02-11 23:47 IST

ವಿಜಯಪುರ : ಭೀಮಾ ತೀರದ ಕುಖ್ಯಾತ ರೌಡಿ ಬಾಗಪ್ಪ ಹರಿಜನನನ್ನು ನಗರದ ರೇಡಿಯೋ ಕೇಂದ್ರದ ಬಳಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ಎರಡು ದಶಕಗಳ ಹಿಂದೆ ಭೀಮಾತೀರದ ಹಂತಕನೆಂದೇ ಕುಖ್ಯಾತಿ ಪಡೆದಿದ್ದ ಚಂದಪ್ಪ ಹರಿಜನ ಸಹಚರನಾಗಿದ್ದ ಬಾಗಪ್ಪ ಹರಿಜನನ ಮೇಲೆ ಈ ಹಿಂದೆಯು ಗುಂಡಿನ ದಾಳಿ ನಡೆದಿತ್ತು. ಕೆಲ ವರ್ಷಗಳ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ. ಆದರೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬಾಗಪ್ಪನನ್ನು ಹತ್ಯೆಗೈದಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News