ಬೆಂಗಳೂರು | ಉದ್ಯಮಿಗೆ ಜೀವ ಬೆದರಿಕೆ ಆರೋಪ: ರೌಡಿ ಶೀಟರ್ ಫೈಟರ್ ರವಿ ಬಂಧನ
Update: 2025-01-24 19:34 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಪಿಸ್ತೂಲಿನಿಂದ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ರೌಡಿಶೀಟರ್ ಬಿ.ಎಂ.ಮಲ್ಲಿಕಾರ್ಜುನ ಯಾನೆ ಫೈಟರ್ ರವಿನನ್ನು ಇಲ್ಲಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಸೋಮಶೇಖರ್, ಶ್ರೀಕಾಂತ್ ಎಂಬಾತನಿಗೆ ಸಾಲದ ರೂಪದಲ್ಲಿ 75 ಲಕ್ಷ ಹಣ ಕೊಟ್ಟಿದ್ದರು. ಹಣ ಮರಳಿ ಪಡೆಯುವ ಸಲುವಾಗಿ ಆಗಾಗ ಶ್ರೀಕಾಂತ್‍ನನ್ನ ಸೋಮಶೇಖರ್ ಭೇಟಿಯಾಗುತ್ತಿದ್ದರು. ಆದರೆ, ಈ ನಡುವೆ ಮಧ್ಯಪ್ರವೇಶಿಸಿದ್ದ ರವಿ, ಶ್ರೀಕಾಂತ್ ಬಳಿ ಹಣ ಕೇಳದಂತೆ ಹಲ್ಲೆಗೈದು, ತಮ್ಮ ಗನ್‍ಮ್ಯಾನ್ ಬಳಿಯಿದ್ದ ಪಿಸ್ತೂಲಿ ತೋರಿಸಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ದಾಖಲಾಗಿದ್ದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ರವಿ ಮತ್ತು ಆತನ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.