×
Ad

Bengaluru | ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವ ವಿಡಿಯೋ ಸೆರೆ: ಟೆಕ್ನಿಷಿಯನ್ ಬಂಧನ

Update: 2025-12-26 19:23 IST

ಸಾಂದರ್ಭಿಕ ಚಿತ್ರ | PC : gemini 

ಬೆಂಗಳೂರು : ಖಾಸಗಿ ಆಸ್ಪತ್ರೆಯೊಂದರ ಆಪರೇಷನ್ ಥಿಯೇಟರ್‌ನ(ಒ.ಟಿ.) ಡ್ರೆಸಿಂಗ್ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಮಾಡಲು ಯತ್ನಿಸಿದ ಜೂನಿಯರ್ ಟೆಕ್ನಿಷಿಯನ್‍ನನ್ನು ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಾಗರಬಾವಿಯ ಎರಡನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಡಾ.ಚೇತನ್ ಎಂಬುವರು ನೀಡಿದ ದೂರಿನ ಮೇರೆಗೆ ಸುವೆಂದು ಮೊಹತಾ(23) ಎಂಬುವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸುವೆಂದು ಒಂದು ವರ್ಷದಿಂದ ಆಸ್ಪತ್ರೆಯ ಆಪರೇಷನ್ ಥಿಯೇಟರ್‍ನಲ್ಲಿ ಜೂನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಕೊಟ್ಟಿಗೆಪಾಳ್ಯದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ. ಡಿ.20ರಂದು ಬೆಳಗ್ಗೆ 8.30ರ ಸುಮಾರಿಗೆ ಶಸ್ತ್ರ ಚಿಕಿತ್ಸಾ ಘಟಕದ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿಗಳು ಬಟ್ಟೆ ಬದಲಾಯಿಸುವಾಗ ಆರೋಪಿ ಇಟ್ಟಿದ್ದ ಮೊಬೈಲ್ ಗಮನಿಸಿದ್ದಾರೆ. ಆತಂಕಗೊಂಡ ಸಿಬ್ಬಂದಿಯು ಮೊಬೈಲ್ ಪರಿಶೀಲಿಸಿದಾಗ ಗುಪ್ತವಾಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News