×
Ad

ವಾಹನ ಚಾಲಕರಿಗೆ ನಿಯಮಿತ ಕಣ್ಣಿನ ತಪಾಸಣೆ ಅನಿವಾರ್ಯ : ದೀಪಕ್

ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

Update: 2026-01-24 12:43 IST

ಬೆಂಗಳೂರು : ವಾಹನ ಚಾಲಕರಿಗೆ ನಿಯಮಿತ ಕಣ್ಣಿನ ತಪಾಸಣೆಯ ಅಗತ್ಯತೆ ಹಾಗೂ ಉತ್ತಮ ದೃಷ್ಟಿ ರಸ್ತೆ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಜಯನಗರ ಠಾಣೆಯ ಪೊಲೀಸ್ ಅಧಿಕಾರಿ ದೀಪಕ್ ತಿಳಿಸಿದ್ದಾರೆ.

ಶುಕ್ರವಾರ ಜಯನಗರದಲ್ಲಿ ವಾಸನ್ ಐ ಕೇರ್ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ನಿಯಮಗಳು, ಜವಾಬ್ದಾರಿಯುತ ವಾಹನ ಚಾಲನೆ ಹಾಗೂ ವಾಹನ ವಿಮೆ ನವೀಕರಣ, ಇವುಗಳ ಮಹತ್ವವನ್ನು ಚಾಲಕರು ಅರಿತುಕೊಳ್ಳಬೇಕಿದೆ ಎಂದರು.

ಹೆಲ್ಮೆಟ್ ರಹಿತ ಹಾಗೂ ಮದ್ಯ ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಬಳಕೆ, ಮೂವರ ಸವಾರಿ, ಅತೀವೇಗದಿಂದ ಚಾಲನೆ ಮಾಡುವುದರಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಇವುಗಳ ನಿಯಂತ್ರಣಕ್ಕೆ ಸವಾರರು ಸಹಕಾರ ನೀಡಬೇಕು ಎಂದು ದೀಪಕ್ ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಸಾರಥಿ ಆಟೋ ಚಾಲಕರ ಸಂಘದ ಸದಸ್ಯರು ಭಾಗವಹಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಎಲ್ಲ ಚಾಲಕರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಜಯನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು, ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯ ಡಾ.ರಾಕೇಶ್, ಡಾ.ಮನೋಹರ್ ಮತ್ತು ಡಾ.ಮಧುರಾ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News