×
Ad

Bengaluru | ಅಡುಗೆ ಅನಿಲ್ ದರ ಏರಿಕೆಗೆ ಯುವ ಕಾಂಗ್ರೆಸ್ ಆಕ್ರೋಶ

Update: 2026-03-10 22:21 IST

ಬೆಂಗಳೂರು : ಕೇಂದ್ರ ಸರಕಾರ ಏಕಾಏಕಿ ಅಡುಗೆ ಅನಿಲ ದರ ಏರಿಕೆ ಮಾಡಿರುವುದನ್ನು ಖಂಡಿಸಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಮಂಗಳವಾರ ಇಲ್ಲಿನ ಆನಂದರಾವ್ ವೃತ್ತದ ಕಾಂಗ್ರೆಸ್ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಜಮಾಯಿಸಿದ ಯುವ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ಮೋದಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಚ್.ಎಸ್.ಮಂಜುನಾಥ್ ಗೌಡ, ಕೇಂದ್ರ ಬಿಜೆಪಿ ಸರಕಾರ ಕಳೆದ 11ವರ್ಷಕ್ಕೂ ಹೆಚ್ಚು ಅವಧಿಯ ಆಡಳಿತದಲ್ಲಿ ಬೆಲೆ ಏರಿಕೆಯನ್ನು ಮಾಡಿರುವುದನ್ನ ಬಿಟ್ಟರೆ ಬೇರೆ ಏನು ಸಾಧನೆ ಮಾಡಿಲ್ಲ. ಅಡುಗೆ ಅನಿಲ ಬೆಲೆ ಏರಿಕೆಯಿಂದ ಬಡವರು, ಮಾಧ್ಯಮವರ್ಗದವರಿಗೆ ಬಹಳ ಸಂಕಷ್ಟವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತವಿದ್ದಾಗ 400 ರೂ., ಸಿಲಿಂಡರ್ ಬೆಲೆ ಇತ್ತು. ಇಂದಿನ ಬಿಜೆಪಿ ಕೇಂದ್ರ ಸರಕಾರದ ಆಡಳಿತದಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ ಎಂದರು.

ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ, ಉದ್ಯೋಗ ಸೃಷ್ಟಿಯಿಲ್ಲ ನಿರುದ್ಯೋಗ ತಾಂಡವವಾಡುತ್ತಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಭರವಸೆಯಾಗಿ ಉಳಿದಿದೆ. ವಿದೇಶದಿಂದ ಕಪ್ಪು ಹಣ ಒಂದು ನಯಾಪೈಸೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News