ಅಮೆರಿಕ, ಇಸ್ರೇಲ್-ಇರಾನ್ ಯುದ್ಧ ವಿರೋಧಿಸಿ ಧರಣಿ
Update: 2026-03-11 00:02 IST
ಬೆಂಗಳೂರು, ಮಾ.10: ಅಮೆರಿಕ, ಇಸ್ರೇಲ್ ಇರಾನ್ ಮೇಲಿನ ಆಕ್ರಮಣಕಾರಿ ಯುದ್ಧ ವಿರೋಧಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜನಪರ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಧರಣಿ ನಡೆಸಲಾಯಿತು.
ಅಮೆರಿಕ, ಇಸ್ರೇಲ್ ಇರಾನ್ ಮೇಲಿನ ಕೂಡಲೇ ನಿಲ್ಲಿಸಬೇಕು. ಅಮಾಯಕ ಜೀವಗಳು ಉಳಿಯಲಿ, ಜಗತ್ತಿನಲ್ಲಿ ಸಂಕಟ ತಪ್ಪಲಿ, ಜಗತ್ತಿನಲ್ಲಿ ಶಾಂತಿಯನ್ನು ಮರು ಸ್ಥಾಪಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.
ಭಾರತ ಸಾರ್ವಭೌಮ ದೇಶ ಯಾರದೇ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿ ಮಣಿಯಬಾರದು. ಇರಾನ್ ಮೇಲಿನ ಯುದ್ಧವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಬಾರದು.
ಇದೇ ವೇಳೆ ಪ್ರತಿಭಟನಾನಿರತರು ಮೇಣದ ಬತ್ತಿ ಹಚ್ಚಿ, ಯುದ್ಧದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪ್ರೊ.ನಗರಗೆರೆ ರಮೇಶ್, ಸಿರಿಮನೆ ನಾಗರಾಜ್, ನಾಗೇಶ್, ಹನುಮೇಗೌಡ, ಶರತ್, ರವಿ ಮತ್ತಿತರರು ಹಾಜರಿದ್ದರು.