ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಕಾಣಿಸಿಕೊಂಡು ಕೆಲ ಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಜ್ಞಾನ ಭಾರತಿ ಠಾಣಾ ವ್ಯಾಪ್ತಿಯ ಸೊಣ್ಣೇನಹಳ್ಳಿ ಸರ್ಕಲ್ ಬಳಿ ಈ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.

ಜಿಲೆಟಿನ್ ಕಡ್ಡಿಗಳಿಗೆ ಟೇಪ್ ಸುತ್ತಿರುವ ಕಿಡಿಗೇಡಿಗಳು

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕ ಧಾವಿಸಿ ಪರಿಶೀಲಿಸಿದರು. ಈ ವೇಳೆ ಅನುಮಾನಾಸ್ಪದ ವಸ್ತು ಇದು ಬಾಂಬ್ ರೀತಿ ಇರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಕೂಡಲೇ ಬಾಂಬ್ ನಿಷ್ಕ್ರಿಯ ದಳವನ್ನ ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ ಅದು ಜಿಲೆಟಿನ್ ಕಡ್ಡಿಗಳು ಎಂಬುದು ಗೊತ್ತಾಗಿದೆ.

ಜಿಲೆಟಿನ್ ಕಡ್ಡಿಗಳು ಬಿಟ್ಟರೆ ಡಿಟೋನೇಟರ್ ಏನು ಪತ್ತೆಯಾಗಿಲ್ಲ. ಅದು ಯಾವುದೇ ಸ್ಪೋಟಕ ಅಲ್ಲ. ಎಂದು ಖುದ್ದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖಚಿತ ಪಡಿಸಿದ್ದಾರೆ

ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲೆಟಿನ್ ಕಡ್ಡಿಗಳನ್ನಿಟ್ಟವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor