Bengaluru | ಎಸ್ಐಆರ್ನ ನಮೂನೆ-7 ದುರುಪಯೋಗ ಆರೋಪ: ಇಬ್ಬರ ವಿರುದ್ಧ ಎಫ್‍ಐಆರ್ ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯ ನಮೂನೆ-7 ಅನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮಲ್ಲೇಶ್ವರಂನ ವಾರ್ಡ್ ನಂ. 64ರಲ್ಲಿ ಬೂತ್ ಏಜೆಂಟ್ ವಸಂತಲಕ್ಷ್ಮೀ ಹಾಗೂ ಅವರ ಸಹಚರರೊಬ್ಬರು 778 ಸುಳ್ಳು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮತದಾರರು ಕ್ಷೇತ್ರದಲ್ಲಿ ಇದ್ದರೂ ಗೈರು ಹಾಜರಿ ಅಥವಾ ಶಾಶ್ವತ ಸ್ಥಳಾಂತರ ಎಂದು ಫಾರ್ಮ್-7 ಸಲ್ಲಿಸಲಾಗಿದೆ. 64ರಲ್ಲಿನ ಮತಗಟ್ಟೆ ನಂಬರ್ 157ರಲ್ಲಿ 122 ಅರ್ಜಿಗಳು, 155ರಲ್ಲಿ 233 ಅರ್ಜಿಗಳು, 156ರಲ್ಲಿ 28, 158ರಲ್ಲಿ 5, 154ರಲ್ಲಿ 47, 205ರಲ್ಲಿ 171, 203ರಲ್ಲಿ 88, 153ರಲ್ಲಿ 14 ಅರ್ಜಿಗಳು ಹೀಗೆ ಒಟ್ಟು 778 ಅರ್ಜಿಗಳು ಮತದಾರರು ಮತಕ್ಷೇತ್ರಗಳಲ್ಲಿ ವಾಸವಿದ್ದರೂ ಸಹಿತ ಅವರನ್ನು ಗೈರುಹಾಜರಿದ್ದಾರೆಂದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಂದು ಫಾರ್ಮ್-7ರನ್ನು ಭರ್ತಿ ಮಾಡಿ ಸುಳ್ಳು ದಾಖಲೆಯನ್ನು ಸಲ್ಲಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.