ಬೆಂಗಳೂರು | ಜಯನಗರದ ಭಾರತ್ ವಿದ್ಯಾ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
Update: 2026-01-26 13:17 IST
ಬೆಂಗಳೂರು: ಜಯನಗರದ ಭಾರತ್ ವಿದ್ಯಾ ಸಂಸ್ಥೆಯ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಲ್. ಶ್ರೀಹರ್ಷ ಧ್ವಜಾರೋಹಣ ನೆರವೇರಿಸಿದರು.
ಕಾನೂನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಾರತ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಿರ್ಮಲ್ ಕುಮಾರ್ ಕೆ.ಆರ್., ಉಪಾಧ್ಯಕ್ಷ ಬಿ.ಸಿ.ಶಿವಲಿಂಗೇಗೌಡ, ಪ್ರೊ.ಎನ್.ಎಸ್.ವಿಜಯ, ಖಜಾಂಚಿ ಬಿ.ಎಲ್. ನಂದಿನಿ, ಪ್ರಾಂಶುಪಾಲೆ ನಜ್ಬುನ್ನೀಸಾ ಮತ್ತಿತರರು ಉಪಸ್ಥಿತರಿದ್ದರು.