ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆಸ್ಕಾಂನ ಸಹಾಯಕ ಇಂಜಿನಿಯರ್
ಬೆಂಗಳೂರು : ಕೇಬಲ್ ಮಾರ್ಗದ ಪರಿಷ್ಕೃ ತ ಅಂದಾಜು ಪಟ್ಟಿಯನ್ನು ನೀಡಲು 35 ಸಾವಿರ ರೂ. ಲಂಚ ಪಡೆಯುವಾಗ ಬೆಸ್ಕಾಂನ ಸಹಾಯಕ ಇಂಜಿನಿಯರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
1049 ಕಿಲೋವ್ಯಾಟ್ ವಿದ್ಯುತ್ ಮಂಜೂರಾತಿಗಾಗಿ, 11 ಕೆ.ವಿ. ಭೂಗತ ಕೇಬಲ್ ಮಾರ್ಗದ ಪರಿಷ್ಕೃತ ಅಂದಾಜು ಪಟ್ಟಿಯನ್ನು ನೀಡುವಂತೆ ಮಹಾಲಕ್ಷ್ಮೀ ಲೇಔಟ್‍ನ ಶಿವಾನಂದರೆಡ್ಡಿ ಎಸ್. ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪೂರ್ಣಪ್ರಜ್ಞ ನಗರದ ಬೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ ಶಶಿ ಕುಮಾರ್ ಟಿ.ಪಿ. 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, 15 ಸಾವಿರ ರೂ. ಮುಂಗಡವಾಗಿ ಪಡೆದಿದ್ದರು.
ಉಳಿದ 35 ಸಾವಿರ ರೂ.ಗಳನ್ನು ಸ್ವೀಕರಿಸುತ್ತಿದ್ದಾಗ ಆರೋಪಿ ಶಶಿ ಕುಮಾರ್ ಟಿ.ಪಿ. ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ