ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದ ಪರಿಷತ್ ಸದಸ್ಯ ಪುಟ್ಟಣ್ಣ ‘ದಸರಾ ಹಬ್ಬದ ಶುಭಾಶಯಗಳು’ ನೆಪದಲ್ಲಿ ಉಡುಗೊರೆ ಕೂಪನ್ ಹಂಚುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.

ಗುರುವಾರ ನಗರದಲ್ಲಿ ಕೆ.ಆರ್.ವೃತ್ತದ ಬಳಿ ಇರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗೆ ಇಂದು ದಸರಾ ಸಂಭ್ರಮ. ನೆನ್ನೆಯವರೆಗೂ ಇರಲಿಲ್ಲ ಅವರದು. ಸಂಭ್ರಮ ಈಗ ಪ್ರಾರಂಭವಾಗಿದೆ. ಈ ಸರಕಾರವೇ ಬಹುಶಃ ಈ ಚುನಾವಣೆಯನ್ನು ನಡೆಸುತ್ತಿದೆ ಎಂಬ ರೀತಿಯಲ್ಲಿ ಸಂಭ್ರಮಪಡುತ್ತಿದ್ದಾರೆ ಎಂದು ಟೀಕಿಸಿದರು.

ಕೂಪನ್ ಇದನ್ನ ಸ್ಕ್ಯಾನ್ ಮಾಡಿದ್ರೆ ಕೆಳಗಡೆ, ಮಾಲ್‍ಗೆ ಹೋಗುತ್ತದೆ. ಈ ಮಾಲ್ ಯಾರದು? ಅಲ್ಲಿಗೆ ಯಾಕೆ ಹೋಗಬೇಕು ಇದು?. ಅಂದ್ರೆ ಕೆಲವರು ಕೆಲವರಿಗೆ ಇಂತಿಂತಹ ವಸ್ತುಗಳು ಇಂತಹ ಕಡೆ ಹೋಗಿ ತೆಗೆದುಕೊಳ್ಳಿ ಎಂದು ಹೇಳಿ ಈ ರೀತಿಯ ಗಿಫ್ಟ್ ಕಾರ್ಡ್‍ಗಳನ್ನು ಹಂಚುತ್ತಿದ್ದಾರೆ. ಅವರೊಬ್ಬರೇ ಹಂಚುತ್ತಾ ಇದ್ದಾರಾ?. 17 ಬಿಇಒಗಳ ಮೂಲಕ ಹಂಚಿಸುತ್ತಿದ್ದಾರೆ ಎಂದು ಅವರು ದೂರಿದರು.

ಅಧಿಕಾರ ಯಂತ್ರ ದುರುಪಯೋಗ: ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಚುನಾವಣೆಯನ್ನು ಇವತ್ತು ಅಧಿಕಾರ ಯಂತ್ರ ದುರುಪಯೋಗ ಮಾಡುವ ಮೂಲಕ ಈ ಚುನಾವಣೆ ನಡೆಸುತ್ತಿದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ನಾವು ನೀಡಿದ ಪುರಾವೆಗಳನ್ನು ಆಧಾರವಾಗಿ ಇಟ್ಟುಕೊಂಡು ಬಿಇಒಗಳ ಮೇಲೆ ಎಫ್‍ಐಆರ್ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor