ಬೆಂಗಳೂರು : ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಬಂಡೆ ಬೊಮ್ಮಸಂದ್ರ ಗ್ರಾಮದ ಸರ್ವೇ ನಂ.38ರಲ್ಲಿ ವಾಸ ಮಾಡುತ್ತಿದ್ದ ಕೊಳಗೇರಿ ನಿವಾಸಿಗಳ ಗುಡಿಸಲು ಮತ್ತು ಶೌಚಾಲಯಕ್ಕೆ ಹಾನಿ ಮಾಡಿ, ನಿವಾಸಿಗಳಿಗೆ ಬೆದರಿಕೆ ಹಾಕಿದ ಗೂಂಡಾಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಬುಧವಾರ ಬಿಡುಗಡೆಯ ಚಿರುತೆಗಳ್ ಸಂಘಟನೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ ನೇತೃತ್ವದಲ್ಲಿ ಕೊಳಗೇರಿ ನಿವಾಸಿಗಳು ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ಕಚೇರಿಗೆ ಖುದ್ದು ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.

‘ದೊಡುಗುಬಿಯ ಕೊಳಗೇರಿ ನಿವಾಸಿಗಳಿಗೆ ಅವರ ಶಾಶ್ವತ ವಸತಿಗಾಗಿ ಗ್ರಾಮದ ಸರ್ವೇ ನಂ.38ರಲ್ಲಿ 20 ಗುಂಟೆ ಜಮೀನನ್ನು ಮಂಜೂರು ಮಾಡಿದ್ದರು. ಅಲ್ಲದೆ, ಆ ಪ್ರದೇಶವನ್ನು ಕೊಳೆಗೇರಿ ಪ್ರದೇಶವೆಂದು ಘೋಷಿಸಲಾಗಿದೆ.

ಮಂಗಳವಾರ, ರಾಮಮೂರ್ತಿ ನಗರದ ಪ್ರಜ್ಞಾ ಮ್ಯಾನೋರ್ ಮತ್ತು ಆನಂದ್ ಎಂಬುವರು ತಮ್ಮ ತಂಡದೊಂದಿಗೆ ಹಾಗೂ ಸ್ಥಳೀಯ ಗೂಂಡಾಗಳು ಬಂದು ಇಲ್ಲಿನ ನಿವಾಸಿಗಳಿಗೆ ಜಾಗವನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ನಗರದಲ್ಲಿ ಕೂಲಿ ಮಾಡಿ, ಭಿಕ್ಷೆ ಬೇಡಿ ಜೀವನ ಸಾಗಿಸುವ ಹಕ್ಕಿಪಿಕ್ಕಿ ಜನಾಂಗದವರಿಗೆ ಸರಕಾರ ವಸತಿ ಕಲ್ಪಿಸಲು ಮುಂದಾದರೆ ಅವರಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಕೊಳಚೇರಿ ನಿವಾಸಿಗಳಿಗೆ ಸರಕಾರ ಸೂಕ್ತ ರಕ್ಷಣೆಗೆ ಕಲ್ಪಿಸಬೇಕು. ಅಲ್ಲದೆ, ಅವರಿಗೆ ಸರಿಯಾದ ರೀತಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮೂರ್ತಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor