×
Ad

ಉಪವಾಸ ಮನುಷ್ಯನ ಆಧ್ಯಾತ್ಮಿಕ ಉನ್ನತಿಯ ಸೋಪಾನ: ರಿಯಾಝ್ ಅಹ್ಮದ್ ರೋಣ

Update: 2024-03-30 13:54 IST

ಬೆಂಗಳೂರು: "ಉಪವಾಸವು ಮನುಷ್ಯನ ಆತ್ಮ ಸಂಸ್ಕರಣೆ ಮಾಡಿ ಅವನನ್ನು ಆಧ್ಯಾತ್ಮಿಕತೆಯ ಉನ್ನತಿಗೇರಿಸುವ ಸೋಪಾನವಾಗುತ್ತದೆ" ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಯಶವಂತಪುರ ವತಿಯಿಂದ ಸ್ಥಳೀಯ ಬಾಲಕ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಚಿಂತಕ ಜಿ.ವಿ ಮೂರ್ತಿ ಮಾತನಾಡಿ "ಮನುಷ್ಯನ ಹೃದಯದಲ್ಲಿ ಪ್ರೀತಿ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು, ಉಪವಾಸದಿಂದ ಉಂಟಾಗುವ ಭಕ್ತಿಯಿಂದ ಜನರ ಮೇಲೆ ಕರುಣೆ ತೋರಲು ಸಾಧ್ಯವಾಗುತ್ತದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಾನೀಯ ಅಧ್ಯಕ್ಷ ಸುಹೇಲ್ ಅಹ್ಮದ್, ಸಯ್ಯದ್ ಮುರಾದ್ ಮುಂತಾದವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News