×
Ad

ಬೆಂಗಳೂರು: ಬೈಕ್ ಕೀ ವಿಚಾರದಲ್ಲಿ ನಡೆದ ಗಲಾಟೆ ಸಹೋದ್ಯೋಗಿಯ ಹತ್ಯೆಯಲ್ಲಿ ಅಂತ್ಯ

Update: 2023-07-31 23:34 IST

ಸಾಂದರ್ಭಿಕ ಚಿತ್ರ (Credit: freepik)

ಬೆಂಗಳೂರು: ಬೈಕ್ ಕೀ ಕೊಡುವ ವಿಚಾರದಲ್ಲಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಓರ್ವ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಗರದ ಹೊಸಕೆರೆಹಳ್ಳಿಯಲ್ಲಿ ನಡೆದಿರುವುದು ವರದಿಯಾಗಿದೆ.

ಹೊಸಕೆರೆ ಹಳ್ಳಿಯಲ್ಲಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ತಿಲಕ್ ಕೊಲೆಯಾದವರು. ಕೃತ್ಯ ನಡೆಸಿದ ಅದೇ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸಿದ್ದರಾಜು ಗಿರಿನಗರ ಠಾಣೆಗೆ ಶರಣಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಒಂದೇ ಕೋಳಿ ಅಂಗಡಿಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಕೊಲೆಯಾದ ತಿಲಕ್ ಹಾಗೂ ಆರೋಪಿ ಸಿದ್ದರಾಜು ಅವರುಗಳಿಗೆ ಮಾಲಕರು ಓಡಾಡಲು ಬೈಕ್ ಕೊಟ್ಟಿದ್ದರು. ಇಬ್ಬರೂ ರೂಮ್‍ನಲ್ಲಿ ಜು.30ರಂದು ರಾತ್ರಿ ಮಧ್ಯಪಾನ ಮಾಡಿದ್ದಾಗ ತಿಲಕ್, ಸಿದ್ದರಾಜುಗೆ ಬೈಕ್ ಕೀ ಕೊಡುವಂತೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದು, ಕೋಪಗೊಂಡ ತಿಲಕ್ ಕುಕ್ಕರ್‍ನಿಂದ ಸಿದ್ದರಾಜು ತಲೆಗೆ ಹೊಡೆದಿದ್ದಾನೆ. ಅದಕ್ಕೆ ಸಿದ್ದರಾಜು ಚಾಕುವಿನಿಂದ ಇರಿದು ತಿಲಕ್ ಎಂಬುವನನ್ನು ಕೊಲೆ ಮಾಡಿ ಗಿರಿನಗರ ಠಾಣೆಗೆ ಶರಣಾಗಿದ್ದಾನೆಂದು ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News