×
Ad

ಬೀ-ಹ್ಯೂಮನ್, ನೀಲ್ & ನಿಹಾಲ್ ಜಂಟಿ ಆಶ್ರಯದಲ್ಲಿ ಇಫ್ತಾರ್ ಕೂಟ

Update: 2024-03-26 15:20 IST

ಬೀ-ಹ್ಯೂಮನ್ ಮತ್ತು ನೀಲ್ & ನಿಹಾಲ್ ಸಂಸ್ಥೆಗಳು ಜಂಟಿಯಾಗಿ ಬೆಂಗಳೂರಿನ ಬ್ಯಾರಿ ವೆಲ್ಫೇರ್ ಸಭಾಂಗಣದಲ್ಲಿ ಮಾ. 22 ಶುಕ್ರವಾರದಂದು ಇಫ್ತಾರ್ ಕೂಟ ನಡೆಸಿತು.

ನೀಲ್ & ನಿಹಾಲ್ ಸಂಸ್ಥೆಯ ಅಧ್ಯಕ್ಷ ಅಡ್ವಕೇಟ್ ಮುಝಫ್ಫರ್ ಅಹ್ಮದ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು. ಬೀ-ಹ್ಯೂಮನ್ ಸಂಸ್ಥೆಯ ಮಂಗಳೂರು ಘಟಕ ಅಧ್ಯಕ್ಷ ಸಿರಾಜ್ ಎರ್ಮಾಲ್ ಅವರು ಸ್ವಾಗತಿಸಿದರು.

ಸಭೆಯ ಮುಖ್ಯ ಅಥಿತಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ , ಬೀ-ಹ್ಯೂಮನ್ ನ ಟ್ರಸ್ಟಿ ಶರೀಫ್ ಬೋಳಾರ್, ಬೀ -ಹ್ಯೂಮನ್ ಸಂಸ್ಥಾಪಕ ಆಸೀಫ್ ಡೀಲ್ಸ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಡ್ವಕೇಟ್ ಬಿ.ಇಬ್ರಾಹಿಂ Ex ಎಂಪಿ, ಅಡ್ವಕೇಟ್ ಇಸ್ತಿಯಾಕ್ ಅಹ್ಮದ್, ಯು.ಹೆಚ್ .ಉಮರ್ (ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು), ಅಡ್ವಕೇಟ್ ಬಿ.ಲತೀಫ್, ಸಯ್ಯದ್ ಮುಜಾಹಿದ್ ಮಾಜಿ ಕಾರ್ಪೊರೇಟರ್, ಅಡ್ವಕೇಟ್ ಕ್ಲಿಫರ್ಡ್.ಎಂ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಯು. ಹೆಚ್ ಉಮರ್ ಅವರನ್ನು ಸನ್ಮಾನಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ಯು. ಟಿ. ಖಾದರ್ ಅವರು, ಮಂಗಳೂರಿನಾದ್ಯಂತ ಸುಮಾರು 12 ವರ್ಷಗಳಿಂದ ಜಾತಿ,ಮತ,ಬೇಧವಿಲ್ಲದೆ ಸೇವೆ ಸಲ್ಲಿಸುತ್ತಿರುವ ಬೀ-ಹ್ಯೂಮನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ ಶ್ಲಾಘಿಸಿದರು.

ತನ್ನ 30 ವರ್ಷವನ್ನು  ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಹುಟ್ಟು ಹಾಕಲು  ಶ್ರಮಿಸಿದ ಯು. ಹೆಚ್ ಉಮರ್ ಅವರಿಗೆ ಈ ಸ್ಥಾನ ಸಿಗಲು ತಡವಾದರೂ ಸರಿಯಾದ ವ್ಯಕ್ತಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅಕಾಡಮಿಯ ಯಶಸ್ಸು ಇವರ ಕೈಯಲ್ಲಿದೆ ಎಂದು ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಲತೀಫ್ SPP ಲೋಕಾಯುಕ್ತ ಕರ್ನಾಟಕ ಸರಕಾರ, ಸುಹೈಲ್ ಕಂದಕ್ , ಹನೀಫ್ ಖಾನ್ ಕೊಡಾಜೆ, ರಿಫಾಯ್, ಶಬೀರ್, ಇಮ್ತಿಯಾಝ್‌, ಇಮ್ರಾನ್, ಅಹ್ನಾಫ್ ಡೀಲ್ಸ್, ಅಲ್ತಾಫ್, ಸಲ್ವಾನ್, ಸುರೇಶ್ ಕುಮಾರ್ ಬಾನಸ್ವಾಡಿ, ಅಡ್ವಕೇಟ್ ಹೆಚ್. ಎಸ್ ಇಶ್ರತುಲ್ಲ, ಹನೀಫ್ ತೋಡಾರ್ ಇನ್ನಿತರು ಉಪಸ್ಥಿತರಿದ್ದರು.

ಇಫ್ತಾರ್ ಕೂಟದಲ್ಲಿ ಸುಮಾರು 750ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News