ಬಿ.ಎಂ.ಬಶೀರ್ ಅವರಿಗೆ ಅಂಬೇಡ್ಕರ್ ಪ್ರಶಸ್ತಿ, ಸನತ್ ಬೆಳಗಲಿಗೆ ಕಲಬುರ್ಗಿ ಪ್ರಶಸ್ತಿ

Update: 2024-03-28 08:11 GMT

ಬಿ.ಎಂ.ಬಶೀರ್  |  ಸನತ್ ಬೆಳಗಲಿ

ಬೆಂಗಳೂರು, ಮಾ.28: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ ಪ್ರಕಟವಾಗಿದ್ದು, 'ವಾರ್ತಾಭಾರತಿ'ಯ ಸುದ್ದಿ ಸಂಪಾದಕರಾದ ಬಿ.ಎಂ.ಬಶೀರ್ ಅವರು 'ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ'ಗೆ ಹಾಗೂ ಹಿರಿಯ ಪತ್ರಕರ್ತ, ವಾರ್ತಾಭಾರತಿಯ ಅಂಕಣಕಾರ ಸನತ್ ಕುಮಾರ್ ಬೆಳಗಲಿಯವರು 'ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.

ಒಟ್ಟು 21 ಮಂದಿಗೆ ಪ್ರಶಸ್ತಿ ಹಾಗೂ ನಾಲ್ವರು ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಎಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ ಇಂತಿವೆ

• ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು.

• ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ

• ಡಿವಿಜಿ ಪ್ರಶಸ್ತಿ: ವಿ.ವೆಂಕಟೇಶ್, ಬೆಂಗಳೂರು

• ಸಿ.ಆರ್.ಕೃಷ್ಣರಾವ್(ಸಿಆರ್ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು

• ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು.

• ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ

• ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:ಸನತ್ ಕುಮಾರ್ ಬೆಳಗಲಿ

• ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ.

• ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: ಆರ್.ಜಯಕುಮಾರ್, ಬೆಂಗಳೂರು.

• ಪಿ.ಆರ್.ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು.

• ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ.

• ರಾಜಶೇಖರಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ

• ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು

• ಮ.ರಾಮಮೂರ್ತಿ ಪ್ರಶಸ್ತಿ: ಎಚ್.ಕೆ.ಬಸವರಾಜು, ಬೆಂಗಳೂರು.

• ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುಲಿಂಗ ಶಾಸ್ತ್ರಿಮಠ, ಬೆಂಗಳೂರು

• ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ

• ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ.

• ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ

• ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ

• ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ.

• ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ

ವಿಶೇಷ ಪ್ರಶಸ್ತಿ:

• ಚಿಕ್ಕಪ್ಪನಳ್ಳಿ ಷಣ್ಮುಖ

• ಎಸ್.ಬಿ.ರವಿಕುಮಾರ್

• ಶ.ಮಂಜುನಾಥ್

• ರವಿ ಮಲ್ಲಾಪುರ.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News