×
Ad

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ

Update: 2025-01-20 22:00 IST

ಬೆಂಗಳೂರು : ರಾಜ್ಯ ಸರಕಾರವು ನೀಡಿರುವ ಆಶ್ವಾಸನೆಯಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನೊಂದಿಗೆ ಮಾತುಕತೆಗಳನ್ನು ನಡೆಸಿ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಫೆಡರೇಷನ್‍ನ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಆಗ್ರಹಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸುವ ಅವರು, ರಾಜ್ಯ ಸರಕಾರವು 2 ಸಾವಿರ ಕೋಟಿ ರೂಪಾಯಿ ಭವಿಷ್ಯ ನಿಧಿ ಹಾಗೂ ಡೀಸೆಲ್ ಬಾಬ್ತು ಸಾಲದ ರೂಪದಲ್ಲಿ ಕೊಡಲು ಒಪ್ಪಿದ ಹಣದ ಅಸಲು ಮತ್ತು ಬಡ್ಡಿ ಹಣವನ್ನು ಸರಕಾರ ಭರಿಸಬೇಕು ಎಂದಿದ್ದಾರೆ.

ಸಾರಿಗೆ ನಿಗಮವು ತಂದಿರುವ ಕ್ಯಾಶ್‍ಲೆಸ್ ಕಾಂಟ್ರಿಬ್ಯೂಟರಿ ವೈದ್ಯಕೀಯ ವ್ಯವಸ್ಥೆಯನ್ನು ಸ್ವಾಗತಾರ್ಹವಾಗಿದ್ದು, ಯೋಜನೆ ತರಲು ಫೆಡರೇಷನ್ ಹಲವಾರು ವರ್ಷಗಳಿಂದ ಆಡಳಿತ ವರ್ಗಕ್ಕೆ ತನ್ನ ಬೇಡಿಕೆಗಳ ಪ್ರಣಾಳಿಕೆ ಮೂಲಕ ಒತ್ತಾಯಿಸಿತ್ತು. ಇ.ಎಸ್.ಐ ಮಾದರಿಯ ಕಾಂಟ್ರಿಬ್ಯೂಟರಿ ವೈದ್ಯಕೀಯ ವ್ಯವಸ್ಥೆ ಬೇಡಿಕೆಗೂ ಒತ್ತಾಯಿಸಿತ್ತು. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲು ದಕ್ಷತೆಯುಳ್ಳ ಒಂದು ಹೊಸ ಶಾಖೆಯನ್ನೇ ಕೇಂದ್ರ ಕಚೇರಿ ಹಾಗೂ ವಿಭಾಗೀಯ ಕಚೇರಿಗಳಲ್ಲಿ ಆರಂಭಿಸಬೇಕು ಎಂದು ಹೇಳಿದ್ದಾರೆ.

ಐ.ಟಿ.ಐ. ಪ್ರಮಾಣ ಪತ್ರ ಸಲ್ಲಿಸಿ ಹಲವಾರು ವರ್ಷಗಳಿಂದ ತರಬೇತಿ ತಾಂತ್ರಿಕ ಸಹಾಯಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರ ಸೇವೆಯನ್ನು ಖಾಯಂ ಮಾಡಬೇಕು. ಕೆಲಸದಿಂದ ತೆಗೆದುಹಾಕಿರುವ ಎಲ್ಲಾ ತರಬೇತಿ ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಂಡು ಅವರ ಬಾಕಿ ಹಣವನ್ನು ಸಂದಾಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News