×
Ad

ಅಧಿವೇಶನ | ವಿಪಕ್ಷ ಸದಸ್ಯರ ಕಡೆಗಿನ ಕ್ಯಾಮರದಲ್ಲಿ ತಾಂತ್ರಿಕ ದೋಷ

Update: 2025-03-04 23:14 IST

ಬೆಂಗಳೂರು : ವಿರೋಧ ಪಕ್ಷದ ನಾಯಕ ಸೇರಿದಂತೆ ವಿಪಕ್ಷದ ಸದಸ್ಯರು ಸದನದಲ್ಲಿ ಮಾತನಾಡುವಾಗ ಅವರನ್ನು ವಾರ್ತಾ ಇಲಾಖೆಯ ಕ್ಯಾಮರಗಳು ಸೆರೆ ಹಿಡಿಯುತ್ತಿಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ಸದಸ್ಯರು ಅಸಮಾಧಾನ ಹೊರಹಾಕಿದರು.

ಈ ಹಿನ್ನೆಲೆಯಲ್ಲಿ ಸದನವನ್ನು 10 ನಿಮಿಷ ಮುಂದೂಡಿ ಸಂಬಂಧ ಪಟ್ಟವರ ಜೊತೆ ಸ್ಪೀಕರ್ ಯು.ಟಿ.ಖಾದರ್, ಸಭೆ ಮಾಡಿ ತಾಂತ್ರಿಕ ದೋಷ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಆದರೆ, ಭೋಜನ ವಿರಾಮದ ಬಳಿಕವು ಇದೇ ಪರಿಸ್ಥಿತಿ ಮುಂದುವರೆದಿತ್ತು.

ಇದರಿಂದ ಅಸಮಾಧಾನಗೊಂಡ ಸ್ಪೀಕರ್, ಕ್ಯಾಮರದಲ್ಲಿರುವ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಬೆಳಗ್ಗೆಯೆ ಸಭೆ ಮಾಡಿ ಸೂಚನೆ ನೀಡಿದ್ದರೂ ಈವರೆಗೆ ಸರಿಪಡಿಸಿಲ್ಲ. ಇದಕ್ಕೆ ಜವಾಬ್ದಾರಿ ಯಾರಿದ್ದಾರೋ ಅಂತಹವರನ್ನು ಅಮಾನತ್ತು ಮಾಡಿ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್‍ಗೆ ಸೂಚನೆ ನೀಡಿದರು. ಅದರಂತೆ, ಕ್ರಮ ಕೈಗೊಳ್ಳುವುದಾಗಿ ಎಚ್.ಕೆ.ಪಾಟೀಲ್ ತಿಳಿಸಿದ ಬಳಿಕ ಕ್ಯಾಮರ ಸರಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News